ಮಂಗಳವಾರ, ಮೇ 18, 2021
28 °C

ಸೆ.12ರಿಂದ ಎಐಟಿಎ ಟೆನಿಸ್ ಚಾಂಪಿಯನ್‌ಷಿಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಶರ್ಮದಾ ಬಾಲು ಹಾಗೂ ತಮಿಳುನಾಡಿನ ವಿಜಯ್ ಸುಂದರ್ ಪ್ರಶಾಂತ್ ಸೆಪ್ಟೆಂಬರ್ 12ರಿಂದ 19ರವರೆಗೆ ಇಲ್ಲಿ ನಡೆಯಲಿರುವ ಜೆಜಿಐ-ಎಐಟಿಎ ಅಖಿಲ ಭಾರತ ರ‌್ಯಾಂಕಿಂಗ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.ಈ ಚಾಂಪಿಯನ್‌ಷಿಪ್ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿ) ಕೋರ್ಟ್‌ನಲ್ಲಿ ನಡೆಯಲಿದ್ದು, ಒಟ್ಟು 2.5 ಲಕ್ಷ ರೂಪಾಯಿ ಬಹುಮಾನ ಒಳಗೊಂಡಿದೆ.ಅರ್ಹತಾ ಸುತ್ತಿನ ಪಂದ್ಯಗಳು ಸೆ.10 ಹಾಗೂ 11ರಂದು ನಡೆಯಲಿವೆ. ಈ ಚಾಂಪಿಯನ್‌ಷಿಪ್‌ನಲ್ಲಿ 400 ಮಂದಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಮಹಿಳಾ ಹಾಗೂ ಪುರುಷರ ವಿಭಾಗದಲ್ಲಿ ದೇಶದ ಅಗ್ರ 20 ಮಂದಿಗೆ ನೇರ ಪ್ರವೇಶ ನೀಡಲಾಗಿದೆ. 4 ಮಂದಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದಾರೆ. 8 ಮಂದಿ ಅರ್ಹತಾ ಸುತ್ತಿನಿಂದ ಗೆದ್ದು ಬರಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಎಲ್‌ಟಿಎ ಜಂಟಿ ಕಾರ್ಯದರ್ಶಿ ಪಿ.ಆರ್.ರಾಮಸ್ವಾಮಿ, ಜೈನ್ ಸಮೂಹ ಸಂಸ್ಥೆಯ ಅಧ್ಯಕ್ಷ ಆರ್.ಚೆನ್‌ರಾಜ್ ಜೈನ್, ಟೂರ್ನಿಯ ಸಂಘಟಕ ಕಿರಣ್ ನಂದಕುಮಾರ್ ಹಾಗೂ ಟೂರ್ನಿ ನಿರ್ದೇಶಕ ಎನ್.ರಮೇಶ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.