ಸೆ.29ಕ್ಕೆ ಭಾರತ ಏಕದಿನ ಕ್ರಿಕೆಟ್ ತಂಡದ ಆಯ್ಕೆ

ಶುಕ್ರವಾರ, ಮೇ 24, 2019
29 °C

ಸೆ.29ಕ್ಕೆ ಭಾರತ ಏಕದಿನ ಕ್ರಿಕೆಟ್ ತಂಡದ ಆಯ್ಕೆ

Published:
Updated:

ಮುಂಬೈ (ಪಿಟಿಐ): ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಗೆ ಸೆಪ್ಟೆಂಬರ್ 29ರಂದು ಭಾರತ ತಂಡದ ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.`ಈ ಸರಣಿಯಲ್ಲಿ ಐದು ಏಕದಿನ ಹಾಗೂ ಒಂದು ಟ್ವೆಂಟಿ-20 ಪಂದ್ಯ ಇರುತ್ತದೆ. ಆದರೆ ಮೊದಲ ಎರಡು ಪಂದ್ಯಗಳಿಗೆ ಚೆನ್ನೈನಲ್ಲಿ ಸೆ.29ರಂದು ತಂಡ ಆಯ್ಕೆ ಮಾಡಲಾಗುವುದು. ತಂಡದ ಪ್ರದರ್ಶನದ ಆಧಾರದ ಮೇಲೆ ಉಳಿದ ಮೂರು ಪಂದ್ಯಗಳಿಗೆ ಆಯ್ಕೆ ನಡೆಯಲಿದೆ~ ಎಂದು ಮೂಲಗಳು ಹೇಳಿವೆ.ಎನ್.ಕೆ.ಪಿ.ಸಾಳ್ವೆ ಚಾಲೆಂಜರ್ ಸರಣಿ ಟೂರ್ನಿಗೆ ಕೂಡ ಇದೇ ಸಂದರ್ಭದಲ್ಲಿ ಆಯ್ಕೆ ನಡೆಯಲಿದೆ. ಈ ಸರಣಿ ನಾಗಪುರದಲ್ಲಿ ಅಕ್ಟೋಬರ್ 10ರಿಂದ 13ರವರೆಗೆ ನಡೆಯಲಿದೆ. ಭಾರತ ರೆಡ್, ಭಾರತ ಬ್ಲೂ ಹಾಗೂ ಭಾರತ ಗ್ರೀನ್ ತಂಡಗಳು ಪಾಲ್ಗೊಳ್ಳಲಿವೆ.ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳಾಪಟ್ಟಿ: ಮೊದಲ ಪಂದ್ಯ: ಅಕ್ಟೋಬರ್ 14 (ಹೈದರಾಬಾದ್), ಎರಡನೇ ಪಂದ್ಯ: ಅ.17 (ನವದೆಹಲಿ). ಮೂರನೇ ಪಂದ್ಯ: ಅ.20 (ಮೊಹಾಲಿ), ನಾಲ್ಕನೇ ಪಂದ್ಯ: ಅ.23 (ಮುಂಬೈ) ಹಾಗೂ ಐದನೇ ಪಂದ್ಯ: ಅ.25 (ಕೋಲ್ಕತ್ತ). ಒಂದು ಟ್ವೆಂಟಿ-20 ಪಂದ್ಯ: ಅ.29 (ಕೋಲ್ಕತ್ತ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry