ಬುಧವಾರ, ನವೆಂಬರ್ 20, 2019
20 °C

ಸೇಂಟ್ ಜಾನ್ಸ್ ಸಂಸ್ಥೆಗೆ `ಒಬಾಮಾ-ಸಿಂಗ್' ಪ್ರಶಸ್ತಿ

Published:
Updated:

ಬೆಂಗಳೂರು:  ಸೇಂಟ್ ಜಾನ್ಸ್ ಸಂಶೋಧನಾ ಸಂಸ್ಥೆಯ ಪೌಷ್ಟಿಕ ವಿಭಾಗವು ಪ್ರತಿಷ್ಠಿತ ಒಬಾಮಾ- ಸಿಂಗ್ 21 ಶತಮಾನದ ಜ್ಞಾನಧಾರಿತ ಮುಂದಾಳತ್ವ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಅಮೆರಿಕ ಮತ್ತು ಭಾರತದ ಶೈಕ್ಷಣಿಕ ಪಾಲುದಾರಿಕಾ ಕಾರ್ಯಕ್ರಮದ ಭಾಗವಾಗಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಪೌಷ್ಟಿಕ ವಿಭಾಗವು ಹಾರ್ವಡ್ ಪಬ್ಲಿಕ್ ಹೆಲ್ತ್ ಸ್ಕೂಲ್‌ನ ಹಾರ್ವಡ್- ಭಾರತ ಪೌಷ್ಟಿಕ ವಿಭಾಗದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.ಇದರಿಂದ ಸಾರ್ವಜನಿಕ ಆರೋಗ್ಯ ವಿಚಾರಗಳ ಕುರಿತು ಸಂಶೋಧನೆ, ಆರೋಗ್ಯ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿದೆ. ಈ ಮೂರು ವರ್ಷಗಳ ಅವಧಿಯ ಪಾಲುದಾರಿಕೆಯು ಡಾ. ಕುರಿಯನ್ ರಾಜ್ ಮತ್ತು ಡಾ. ಅನುರಾ  ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)