ಸೇಂಟ್ ಜೋಸೆಫ್ಸ್ ತಂಡಕ್ಕೆ ಸಮಗ್ರ ಪ್ರಶಸ್ತಿ

7
ಡೆಕ್ಕನ್ ಅಥ್ಲೆಟಿಕ್ ಕ್ಲಬ್ ವಾರಾಂತ್ಯ ಕೂಟ: ಪ್ರವೀಣ್, ಸಾಗರ್ ಮಿಂಚಿನ ಓಟ

ಸೇಂಟ್ ಜೋಸೆಫ್ಸ್ ತಂಡಕ್ಕೆ ಸಮಗ್ರ ಪ್ರಶಸ್ತಿ

Published:
Updated:
ಸೇಂಟ್ ಜೋಸೆಫ್ಸ್ ತಂಡಕ್ಕೆ ಸಮಗ್ರ ಪ್ರಶಸ್ತಿ

ಬೆಂಗಳೂರು: ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ತಂಡದವರು ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್' ಪತ್ರಿಕಾ ಗುಂಪು ಪ್ರಾಯೋಜಿತ 24ನೇ ವಾರ್ಷಿಕ ವಾರಾಂತ್ಯ ಅಥ್ಲೆಟಿಕ್ಸ್ ಕೂಟದ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ.



ಈ ತಂಡದವರು ನಾಲ್ಕು ವಾರಗಳ ಸ್ಪರ್ಧೆಗಳಿಂದ ಒಟ್ಟು 2965 ಪಾಯಿಂಟ್ ಗಳಿಸಿ ಈ ಸಾಧನೆ ಮಾಡಿದರು. ಕೂಟದ ಕೊನೆಯ ವಾರ ಮ್ಯಾಕ್ಸ್‌ಮುಲ್ಲರ್ ಪಬ್ಲಿಕ್ ಸ್ಕೂಲ್‌ನ ಎಸ್.ಪ್ರವೀಣ್ ಕುಮಾರ್ ಮತ್ತು ವಿಎಲ್‌ಎಸ್ ವಿದ್ಯಾಸಾಗರ್ ಕನ್ನಡ ಹೈಸ್ಕೂಲ್‌ನ ಡಿ.ಸಾಗರ್ ಅವರು 16 ಹಾಗೂ 13 ವರ್ಷ ವಯಸ್ಸಿನೊಳಗಿನ ಬಾಲಕರ ವಿಭಾಗದಲ್ಲಿ  ತಲಾ ಎರಡು ಚಿನ್ನದ ಪದಕ ಗೆದ್ದಿದ್ದಾರೆ.



ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಈ ಕೂಟದಲ್ಲಿ ಪ್ರವೀಣ್ 800 ಮೀ. ಹಾಗೂ 3,000 ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದರು. ಸಾಗರ್ 800 ಮೀ. ಹಾಗೂ ಷಾಟ್‌ಪಟ್‌ನಲ್ಲಿ ಅಗ್ರಸ್ಥಾನ ಗಳಿಸಿದರು.



ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಎನ್.ಹರ್ಷ 16 ವರ್ಷದೊಳಗಿನವರ ವಿಭಾಗದ 110 ಮೀ. ಹರ್ಡಲ್ಸ್‌ನಲ್ಲಿ ಬಂಗಾರ ಗೆದ್ದರು. 100 ಮೀ. ಓಟದಲ್ಲಿ ಇಂದಿರಾನಗರ ಹೈಸ್ಕೂಲ್‌ನ ಎಂ. ಪ್ರವೀಣ್ ಕುಮಾರ್ (11.7 ಸೆ.) ಹಾಗೂ ಸೇಂಟ್ ಯಶ್ ಪಬ್ಲಿಕ್ ಸ್ಕೂಲ್‌ನ ನಿಂಗರಾಜು (12.7 ಸೆ.)16ವರ್ಷದೊಳಗಿನವರ ಮತ್ತು 13ವರ್ಷದೊಳಗಿನವರ ವಿಭಾಗಗಳಲ್ಲಿ ಚಿನ್ನ ಗಳಿಸಿ ವೇಗದ ರಾಜರೆನಿಸಿದರು. 



ಬಾಲಕರ ಮತ್ತು ಬಾಲಕಿಯರ ವಿಭಾಗಗಳ ಪ್ರತಿ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಗಳಿಸಿದವರಿಗೆ ಆಕರ್ಷಕ ಪದಕಗಳ ಜತೆಗೆ ಕ್ರಮವಾಗಿ ರೂ.800, ರೂ.500 ಮತ್ತು ರೂ.300 ರೂಪಾಯಿಗಳ ನಗದು ಬಹುಮಾನಗಳನ್ನು ನೀಡಲಾಯಿತು. ಇದಲ್ಲದೆ ಮೊದಲ 8 ಸ್ಥಾನಗಳನ್ನು ಗಳಿಸಿದವರಿಗೆ ಅರ್ಹತಾ ಪತ್ರಗಳನ್ನೂ ನೀಡಲಾಯಿತು.



ಬಾಲಕರ ವಿಭಾಗದ ಫಲಿತಾಂಶಗಳು ಇಂತಿವೆ.

13ವರ್ಷದೊಳಗಿನವರು:


100 ಮೀ. ಓಟ: ನಿಂಗರಾಜು (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್; ಕಾಲ: 12.7ಸೆ.)-1, ಸಿ.ಜಿ.ಯೋಗೇಶ್ (ವಿಎಲ್‌ಎಸ್ ವಿದ್ಯಾಸಾಗರ್ ಕನ್ನಡ ಹೈಸ್ಕೂಲು)-2, ಅನೀಶ್ ಯಾದವ್ (ಆರ್ಮಿ ಪಬ್ಲಿಕ್ ಸ್ಕೂಲ್)-3;  800 ಮೀ. ಓಟ: ಡಿ.ಸಾಗರ್ (ವಿಎಲ್‌ಎಸ್ ವಿದ್ಯಾಸಾಗರ್ ಕನ್ನಡ ಹೈಸ್ಕೂಲು; ಕಾಲ: 2 ನಿ.26.9ಸೆ.)-1, ನಿಂಗರಾಜು (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-2, ದಿಲೀಪ್ (ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-3; 3,000 ಮೀ. ಓಟ: ಎಲ್.ಎಸ್.ಹರಿಕೃಷ್ಣ (ಸೇಂಟ್ ಜೋಸೆಫ್ಸ್ ಇಂಡಿಯನ್ ಸ್ಕೂಲ್; ಕಾಲ: 11 ನಿ.11.8ಸೆ.)-1, ಅಕ್ಷಯ್ -2, ರಾಜಶೇಖರ್ (ಇಬ್ಬರೂ ಸೇಂಟ್ ಯಶ್ ಪಬ್ಲಿಕ್ ಸ್ಕೂಲ್)-3; 80 ಮೀ. ಹರ್ಡಲ್ಸ್: ಸಿ.ಜಿ.ಯೋಗೇಶ್ (ಕಾಲ: 15.3ಸೆ.)-1, ಎಲ್.ಎಸ್.ಹರಿಕೃಷ್ಣ-2, ಆರ್.ಚಂದನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-3; ಲಾಂಗ್‌ಜಂಪ್: ಅನೀಶ್ ಯಾದವ್ (ದೂರ: 5.10 ಮೀ.)-1, ಸಂಜೀತ್ ಕುಮಾರ್ (ಸಿಲಿಕಾನ್ ಸಿಟಿ ಎ.ಎಸ್.ಎಜುಕೇಷನ್)-2, ಸಾಗರ್ ಅಭಿಷೇಕ್ (ಆರ್ಮಿ ಪಬ್ಲಿಕ್ ಸ್ಕೂಲ್)-3; ಟ್ರಿಪಲ್ ಜಂಪ್: ಸುಜಯ್ ಸುಬ್ರಹ್ಮಣ್ಯಂ (ಶ್ರೀಕುಮಾರನ್ ಚಿಲ್ಡ್ರನ್ಸ್ ಹೋಮ್; ದೂರ: 9.15ಮೀ.)-1, ಆರ್.ಯಾಜಿತ್ ಕುಮಾರ್ (ಕೇಂದ್ರೀಯ ವಿದ್ಯಾಲಯ)-2, ಶೌರ್ಯ ಅಪ್ಪಯ್ಯ (ವಿದ್ಯಾನಿಕೇತನ ಸ್ಕೂಲ್)-3; ಹೈಜಂಪ್: ರಾಹುಲ್ ರಘು (ವಿದ್ಯಾನಿಕೇತನ ಸ್ಕೂಲ್; ಎತ್ತರ: 1.31ಮೀ.)-1, ಜಿ.ಅಭಿನವ್ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ಶೌರ್ಯ ಅಪ್ಪಯ್ಯ-3; ಷಾಟ್‌ಪಟ್: ಡಿ.ಸಾಗರ್ (ದೂರ: 10.70ಮೀ.)-1, ವರುಣ್ ಅಡ್ತಿ ಡಿ.ಎಸ್ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ರೋಹಿತ್ ಜಹಗೀರದಾರ್ (ವಿದ್ಯಾನಿಕೇತನ್        ಸ್ಕೂಲ್)-3.



16 ವರ್ಷದೊಳಗಿನವರು:

100 ಮೀ. ಓಟ:
ಎಂ.ಪ್ರವೀಣ್ ಕುಮಾರ್ (ಇಂದಿರಾನಗರ ಹೈಸ್ಕೂಲು; ಕಾಲ: 11.7ಸೆ.)-1, ಸಾಹಿಲ್ ಶಂಕರ್ (ವಿದ್ಯಾನಿಕೇತನಾ ಪಬ್ಲಿಕ್ ಸ್ಕೂಲ್)-2, ನಿಖಿಲ್ ರೋಹನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-3; 800ಮೀ. ಓಟ: ಎಸ್.ಪ್ರವೀಣ್ ಕುಮಾರ್ (ಮ್ಯಾಕ್ಸ್ ಮುಲ್ಲರ್ ಪಬ್ಲಿಕ್ ಸ್ಕೂಲ್; ಕಾಲ: 2 ನಿ.13.6ಸೆ.)-1, ಎನ್.ರಕ್ಷಿತ್ ಗೌಡ (ಫ್ಲಾರೆನ್ಸ್ ಹೈಸ್ಕೂಲು)-2, ಸುರೇಶ್ ಒರಾನ್ (ಕೇಂದ್ರೀಯ ವಿದ್ಯಾಲಯ)-3; 3,000ಮೀ. ಓಟ: ಎಸ್.ಪ್ರವೀಣ್ ಕುಮಾರ್ (ಕಾಲ: 10 ನಿ.29.9ಸೆ.)-1, ಎಸ್.ಹರ್ಷ -2, ಎಸ್.ಶರತ್ (ಇಬ್ಬರೂ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್)-3; 110ಮೀ. ಹರ್ಡಲ್ಸ್: ಎನ್.ಹರ್ಷ (ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್; ಕಾಲ: 20.1ಸೆ.)-1, ನಿಖಿಲ್ ರೋಹನ್ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ಎನ್.ಡಿ.ಕೃಷ್ಣಪ್ರಸಾದ್ (ಇಂದಿರಾನಗರ ಸ್ಕೂಲ್)-3;  ಲಾಂಗ್‌ಜಂಪ್: ಎಸ್.ಜೀವನ್ (ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡೆರಿ ಎಜುಕೇಷನ್; ದೂರ: 5.65 ಮೀ.)-1, ಬಿ.ಜಿ.ಆಕಾಶ್ (ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್)-2, ಡಿ.ಸಂಕರ್ಷನ್ (ದಿಲ್ಲಿ ಪಬ್ಲಿಕ್ ಸ್ಕೂಲ್)-3; ಟ್ರಿಪಲ್ ಜಂಪ್: ಬಿ.ಸಚಿನ್ ಗೌಡ (ಅಕಾಯ್ ಪಬ್ಲಿಕ್ ಸ್ಕೂಲ್; ದೂರ: 11.06 ಮೀ.)-1, ಕಿರಣ್ ಗೌಡ (ದೇವಮಾತಾ ಸೆಂಟ್ರಲ್ ಸ್ಕೂಲ್)-2, ಅಭಿರಾಮ್ ನಟರಾಜನ್ (ರ‌್ಯಾನ್ ಇಂಟರ್‌ನ್ಯಾಶನಲ್ ಸ್ಕೂಲ್)-3; ಹೈಜಂಪ್: ಪ್ರೇರಣ್ ಮಂಜುನಾಥ್ (ವಿದ್ಯಾನಿಕೇತನಾ ಪಬ್ಲಿಕ್ ಸ್ಕೂಲ್; ಎತ್ತರ: 1.60ಮೀ.)-1, ಅಭಿರಾಮ್ ನಟರಾಜನ್ (ರ‌್ಯಾನ್ ಇಂಟರ್‌ನ್ಯಾಶನಲ್ ಸ್ಕೂಲ್)-2, ಬಿ.ಜೆ.ಅಕ್ಷಯ್ (ವಿದ್ಯಾನಿಕೇತನ್ ಪಬ್ಲಿಕ್ ಶಾಲೆ)-3; ಷಾಟ್‌ಪಟ್: ಬಿ.ವಿ.ರಾಹುಲ್ (ಇಂದಿರಾನಗರ ಹೈಸ್ಕೂಲು; ದೂರ: 9.96 ಮೀ.)-1, ವಿ.ಸ್ನೇಹಿತ್ ಗೌಡ (ಇಂದಿರಾ ನಗರ ಹೈಸ್ಕೂಲು)-2, ರಿಕ್ಷಿತ್ ಪಿ.ಭಟ್ (ಆರ್.ಟಿ.ನಗರ ಪಬ್ಲಿಕ್ ಶಾಲೆ)-3.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry