ಗುರುವಾರ , ನವೆಂಬರ್ 21, 2019
27 °C

ಸೇಡಂ: ಕೊನೆಯ ದಿನ 12 ನಾಮಪತ್ರ ಸಲ್ಲಿಕೆ

Published:
Updated:

ಸೇಡಂ: ಬುಧವಾರ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾದ್ದುರಿಂದ  ಸೇಡಂ ವಿಧಾನ ಸಭಾ ಮತಕ್ಷೇತ್ರದಿಂದ ಚುನಾವಣೆಗೆ ಜೆಡಿಎಸ್‌ನಿಂದ ಮುಕ್ರಂಖಾನ, ಬಿಎಸ್‌ಆರ್‌ನಿಂದ ಕನ್ನಯ್ಯ, ಪಕ್ಷೇತರರಾಗಿ ಜಗನ್ನಾಥ ರೆಡ್ಡಿ, ಮುಕುಂದ ರೆಡ್ಡಿ, ಸಮಾಜವಾದಿ ಪಕ್ಷದಿಂದ ಅಮೃತಪ್ಪ ನಾಮಪತ್ರ ಸಲ್ಲಿಸಿದರು.ಕೊನೆಯ ದಿನವಾದ ಬುಧವಾರ ಒಟ್ಟು 12 ನಾಮಪತ್ರಗಳನ್ನು ಸಲ್ಲಿಸುವ ಮೂಲಕ ಬಿಎಸ್‌ಪಿ ಪಕ್ಷದ ಅಭ್ಯರ್ಥಿ ಶಿವಶರಣಪ್ಪ ಶಿವಪ್ಪ, ಪಕ್ಷೇತರ ಅಭ್ಯರ್ಥಿ ಗುಂಡಪ್ಪ ಮತ್ತು ಜೆಡಿಯು ಪಕ್ಷದ ಶಂಕರ ಬಂಡಿ ಸೇರಿದಂತೆ ಒಟ್ಟು 8 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದರು.ಪೊಲೀಸ್ ಬಿಗಿ ಬಂದೊಬ ಸ್ತ್ ಒದಿಗಿಸಲಾಗಿತ್ತು.ಚಿಂಚೋಳಿ: 6 ಬಿಜೆಪಿ ತಾ.ಪಂ. ಸದಸ್ಯರು ಕೆಜೆಪಿ ಸೇರ್ಪಡೆ

ಚಿಂಚೋಳಿ: ಇಲ್ಲಿನ ತಾಲ್ಲೂಕು ಪಂಚಾಯಿತಿಯ ಬಿಜೆಪಿಯ 6 ಮಂದಿ ಸದಸ್ಯರು ಚಿಂಚೋಳಿ ಮೀಸಲು ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ, ಮಾಜಿ ಸಚಿವ ಸುನೀಲ ವಲ್ಯಾಪುರ ನೇತೃತ್ವದಲ್ಲಿ ಬುಧವಾರ ಕೆಜೆಪಿ ಸೇರಿದರು. ತಾಲ್ಲೂಕು ಪಂಚಾಯತ ನಿಕಟ ಪೂರ್ವ ಅಧ್ಯಕ್ಷ, ಮೋಘಾದ ರಾಮರಾವ್ ಪಾಟೀಲ ನೇತೃತ್ವದಲ್ಲಿ ಐನಾಪುರದ ಸುನೀತಾ ರವೀಂದ್ರ ಪಡಶೆಟ್ಟಿ, ಚಂದನಕೇರಾದ ಉಷಾ ಮಂಜುನಾಥ ಕಾಬಾ, ಪಸ್ತಪೂರದ ಅನುಸೂಯಾ ಭವಾನಿಸಿಂಗ್ ರಾಠೋಡ್, ಕೋಡ್ಲಿಯ ಗುಂಡಪ್ಪ ಮಾಳಗೆ, ಮಿರಿಯಾಣದ ಕಮಲಮ್ಮಾ ವೀರಣ್ಣ ಒಡೆಯರಾಜ ಬಿಜೆಪಿ ತ್ಯಜಿಸಿ ಕೆಜೆಪಿ ಸೇರಿದರು.ಇದೇ ಸಮಯದಲ್ಲಿ ಗೋಟೂರು, ಕೋಡ್ಲಿ, ಹಸರಗುಂಡ ಗ್ರಾಮದ ಮುಖಂಡರು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ತ್ಯಜಿಸಿ ಕೆಜೆಪಿ ಸೇರಿದ್ದಾರೆ.ಬಿಜೆಪಿಗೆ ಸೇರ್ಪಡೆ

ಜೇವರ್ಗಿ: ತಾಲ್ಲೂಕಿನ ಯಾಳವಾರ, ಕೊಡಚಿ ಹಾಗೂ ಹಾಲಹಡ್ಲಾ ಗ್ರಾಮದ ಅನೇಕ ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.  ಯಾಳವಾರ ಗ್ರಾಮದ ಗುರಪ್ಪ ನರಿಬೋಳ, ಮಲ್ಲಪ್ಪ ಬಡಿಗೇರ, ಶರಣಪ್ಪ ಸಿಂಗನಳ್ಳಿ, ಶಂಕರ ದೊಡ್ಡಮನಿ, ಸಾಯಬಣ್ಣ ಗೋಗಿ ಬಿಜೆಪಿ ಸೇರಿದ್ದಾರೆ. ಕೊಡಚಿ ಗ್ರಾಮದ ಅಯ್ಯಪ್ಪ ಕೇದಾರ, ಸಿದ್ರಾಮ ಸಿದ್ಧಾಪುರ, ಸಿದ್ದು ಕವಾಲ್ದಾರ್, ಭೀಮರಾಯ ಗುರಿಕಾರ, ನಿಂಗಣ್ಣ ಕವಾಲ್ದಾರ್, ಶರಣಪ್ಪ ಮದರಿ ಬಿಜೆಪಿ ಸೇರಿದ್ದಾರೆ. ಜೇವರ್ಗಿ: 49ನಾಮಪತ್ರ

ಜೇವರ್ಗಿ: `ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಏ.15ರಿಂದ-17ರವರೆಗೆ, 31ಜನ ಅಭ್ಯರ್ಥಿಗಳು ಒಟ್ಟು 49 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದರಿಂದ ಒಟ್ಟು 18 ಅಭ್ಯರ್ಥಿಗಳು-20 ನಾಮಪತ್ರಗಳನ್ನು ಸಲ್ಲಿಸಿದ್ದಾರೆ' ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ಎನ್.ಗೋಠೆ ತಿಳಿಸಿದ್ದಾರೆ.

ಏ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ಪ್ರಮುಖವಾಗಿ ಬಿಜೆಪಿಯಿಂದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕಾಂಗ್ರೆಸ್ ಪಕ್ಷದಿಂದ ಡಾ.ಅಜಯಸಿಂಗ್, ಜೆಡಿಎಸ್ ಪಕ್ಷದಿಂದ ಕೇದಾರಲಿಂಗಯ್ಯ ಹಿರೇಮಠ, ಕೆಜೆಪಿಯಿಂದ ಮಲ್ಲಿನಾಥಗೌಡ ಪಾಟೀಲ್ ಯಲಗೋಡ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಬೈಲಪ್ಪ ನೆಲೋಗಿ, ಬಿಎಸ್‌ಪಿಯಿಂದ ಹುಸೇನ ಪಟೇಲ್ ಹೂಡಾ ಇಜೇರಿ, ಜೆಡಿಯು ಪಕ್ಷದಿಂದ ಎಂ.ಎಸ್.ಪಾಟೀಲ್ ನರಿಬೋಳ, ಸಿಪಿಐ ಪಕ್ಷದಿಂದ ಮಹೇಶಕುಮಾರ ರಾಠೋಡ ನಾಮಪತ್ರ ಸಲ್ಲಿಸಿದ್ದಾರೆ.ಚಿತ್ತಾಪುರ: 8 ಜನರಿಂದ ನಾಮಪತ್ರ ಸಲ್ಲಿಕೆ

ಚಿತ್ತಾಪುರ: ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ವಿವಿಧ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು ಎಂಟು ಜನರು ತಮ್ಮ ಉಮೇದುವಾರಿಕೆ ನಾಮಪತ್ರಗಳನ್ನು ಚುನಾವಣಾಧಿಕಾರಿ ಚಂದ್ರಶೇಖರ ದೊಡ್ಮನಿ ಅವರಿಗೆ ಸಲ್ಲಿಸಿದರು.  ಜಾತ್ಯತೀತ ಜನತಾ ದಳ ಪಕ್ಷದ ಅಭ್ಯರ್ಥಿ ತಿಪ್ಪಣ್ಣ ಒಡೆಯರಾಜ್ ಅವರು ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೂರ್ಯಕಾಂತ ಕಾಳೇಕರ್, ತಾಲ್ಲೂಕು ಹಿರಿಯ ಉಪಾಧ್ಯಕ್ಷ ಶಿವಶರಣರೆಡ್ಡಿ ಭಂಕಲಗಾ, ಜಿಲ್ಲಾ ಕಾರ‌್ಯಕಾರಿ ಸಮಿತಿ ಸದಸ್ಯ ಮಶಿಯೋದ್ದಿನ್ ಕಲ್ಯಾಣಿ, ಮಹಿಳಾ ಘಟಕದ ಅಧ್ಯಕ್ಷೆ ಮಹಾದೇವಿ ಕೊಂಚೂರು ಅವರೊಂದಿಗೆ ತಹಶೀಲ್ ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆಯ ನಾಮಪತ್ರ ಸಲ್ಲಿಸಿದರು.ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಅಯ್ಯಪ್ಪ ಹಣಮಂತ ರಾಮತೀರ್ಥ, ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟೇಶ ತಾಯಪ್ಪ ದಂಡಗುಲ್ಕರ್, ಮಹಾದೇವ ಶಿವಪ್ಪ ತಳವಾರ, ಸೀತಾರಾಮ ಹೇಮ್ಲಾ ರಾಠೋಡ್, ಜೇಮ್‌ಸಿಂಗ್ ಪಾಂಡು ರಾಠೋಡ್, ಶರಣಪ್ಪ ನಾಗಪ್ಪ ತೊಟ್ನಳ್ಳಿ, ರಾಜು ಮುಕ್ಕಣ್ಣ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಲು ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಎಸ್.ಎಫ್ ಸಂಜೀವಣ್ಣನವರ್, ಶಿರಸ್ತೇದಾರ್ ಶ್ರೀನಿವಾಸ್ ಚಾಪೇಲ್ ಉಪಸ್ಥಿತರಿದ್ದರು.ಆಳಂದ: ನಾಮಪತ್ರ ಸಲ್ಲಿಕೆ

ಆಳಂದ: ಆಳಂದ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಬುಧವಾರ ಒಂಬತ್ತು ಜನ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಹಶೀಲ್ದಾರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾದವು ಎಂದು ಚುನಾವಣಾಧಿಕಾರಿ ರಾಚಣ್ಣಾ ಬಿ. ತಿಳಿಸಿದರು.ಇಂದು ಸಲ್ಲಿಕೆಯಾದ ಒಂಬತ್ತು ನಾಮಪತ್ರಗಳಲ್ಲಿ ಕೆಜೆಪಿಯಿಂದ ಬಿ. ಆರ್.ಪಾಟೀಲ, ಜೆಡಿಎಸ್‌ನಿಂದ ಸುಭಾಷ್ ಆರ್.ಗುತ್ತೇದಾರ ಮತ್ತು ಸಮಾಜವಾದಿ ಪಕ್ಷದಿಂದ ಖಂಡೇರಾವ ಮಾರುತಿ ಬುರಲೆ ನಾಮಪತ್ರ ಸೇರಿವೆ. ಉಳಿದಂತೆ ಬಹುಜನ ಸಮಾಜವಾದಿ ಪಕ್ಷದಿಂದ ರಾಮಚಂದ್ರ ಶಂಕರರಾವ, ರಾಷ್ತ್ರೀಯ ಸಮಾಜ ಪಕ್ಷದಿಂದ ದತ್ತಪ್ಪ ಕೃಷ್ಣಪ್ಪ, ರಾಷ್ತ್ರೀಯ ಕಾಂಗ್ರೆಸ್ ಪಕ್ಷದಿಂದ ಶಿವಾನಂದ ಮಲ್ಲಯ್ಯ ಹಿರೇಮಠ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಶಂಕರರಾವ ರೇವಣಸಿದ್ದಪ್ಪ, ಬಾಬುರಾವ ಹಣಮಂತ, ಸಿದ್ರಾಮಪ್ಪ ನಾಗಪ್ಪ ಅವರು ್ಮ ನಾಮಪತ್ರ ಸಲ್ಲಿಸಿದ್ದಾರೆ.ಬಿ.ಆರ್.ಪಾಟೀಲ, ಸುಭಾಷ್ ಗುತ್ತೇದಾರ ಮತ್ತು ಖಂಡೆರಾವ ಮಾರುತಿ ಅವರು ಸೋಮವಾರ ಸಹ ನಾಮಪತ್ರ ಸಲ್ಲಿಸಿದ್ದರು. ಒಟ್ಟು 14 ಜನ ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ನಾಮಪತ್ರ                     ಸಲ್ಲಿಸಿದಂತಾಗಿದೆ.

ಪ್ರತಿಕ್ರಿಯಿಸಿ (+)