ಸೇತುವೆಯಿಂದ ಬಸ್ ಉರುಳಿ ಬಿದ್ದು 3 ಸಾವು

7

ಸೇತುವೆಯಿಂದ ಬಸ್ ಉರುಳಿ ಬಿದ್ದು 3 ಸಾವು

Published:
Updated:

ಕಾರವಾರ: ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಉರುಳಿಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಅಂಕೋಲಾ ತಾಲ್ಲೂಕಿನ ಕೊಡ್ಲಗದ್ದೆ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶುಕ್ರವಾರ ರಾತ್ರಿ 10.40ರ ಸುಮಾರಿಗೆ ಸಂಭವಿಸಿದೆ.ಮೃತರ ವಿವರ ತಿಳಿದುಬಂದಿಲ್ಲ. ಅಪಘಾತ ಸಂಭವಿಸಿದ ಪ್ರದೇಶವು ಅರಣ್ಯ ಪ್ರದೇಶವಾದ್ದರಿಂದ ಸಂಪರ್ಕಕ್ಕೆ ತೊಂದರೆಯಾಗಿದ್ದು, ರಕ್ಷಣಾ ಕಾರ್ಯ ವಿಳಂಬವಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಶಿರಸಿ, ಯಲ್ಲಾಪುರ ಮತ್ತು ಕಾರವಾರ ಆಸ್ಪತ್ರೆಗೆ ಸಾಗಿಸಲಾಗಿದೆ.

 

ಹಲವರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ, ಬೆಳಗಾವಿಯ ಕೆಎಲ್‌ಇ ಅಸ್ಪತ್ರೆಗೆ ಸಾಗಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry