ಸೇತುವೆಯ ತಡೆಗೋಡೆ ದುರಸ್ತಿ

7

ಸೇತುವೆಯ ತಡೆಗೋಡೆ ದುರಸ್ತಿ

Published:
Updated:
ಸೇತುವೆಯ ತಡೆಗೋಡೆ ದುರಸ್ತಿ

ಮಹದೇವಪುರ:  ಕ್ಷೇತ್ರದ ವರ್ತೂರು ಗ್ರಾಮದ ಹೊರವಲಯದಲ್ಲಿ ಕೆರೆಯ ನೀರು ಹರಿದುಹೋಗುವಲ್ಲಿ ನಿರ್ಮಿಸಲಾಗಿರುವ ಸೇತುವೆಯ ತಡೆಗೋಡೆಯನ್ನು ಈಚೆಗೆ ದುರಸ್ತಿಗೊಳಿಸಲಾಯಿತು.ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಸೇತುವೆ ಕಳಪೆ ಕಾಮಗಾರಿಯಿಂದಾಗಿ ಶಿಥಿಲಗೊಂಡಿದೆ. ಅಲ್ಲದೆ ತಡೆಗೋಡೆ ಹಂತ ಹಂತವಾಗಿ ಮುರಿದು ಬೀಳುತ್ತಿದೆ ಎಂಬುದರ ಕುರಿತಾಗಿ `ಪ್ರಜಾವಾಣಿ~ಯಲ್ಲಿ `ಸೇತುವೆ ತಡೆಗೋಡೆಗೆ ಬಿರುಕು~ ಎಂಬ ವರದಿ ಪ್ರಕಟವಾಗಿತ್ತು.ವರದಿಗೆ ಸ್ಪಂದಿಸಿದ ಬಿಬಿಎಂಪಿ ಕೂಡಲೇ ಮುರಿದು ಬಿದ್ದ ತಡೆಗೋಡೆಯನ್ನು ಸಿಮೆಂಟ್ ಮೂಲಕ ದುರಸ್ತಿಗೊಳಿಸಿದೆ. `ಆದಷ್ಟು ಶೀಘ್ರದಲ್ಲಿ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಬೇಕು~ ಎಂದು ಜನತೆ ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry