ಶುಕ್ರವಾರ, ಮೇ 7, 2021
26 °C

ಸೇತುವೆ ಎತ್ತರಿಸಲು ಕಾಂಗ್ರೆಸ್ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಗಡಿ ಭಾಗದಲ್ಲಿ ಹರಿಯುವ ಮಾಂಜ್ರಾ ನದಿಯಲ್ಲಿ ಪ್ರತಿವರ್ಷ ಪ್ರವಾಹ ಬಂದು ಭಾಲ್ಕಿ ತಾಲ್ಲೂಕಿನ ಸಾಯಗಾಂವ ಮತ್ತು ಕೋಂಗಳಿ ಸೇತುವೆಗಳು ಮುಳುಗುತ್ತಿವೆ. ಈ ಎರಡೂ ಸೇತುವೆಗಳ ಎತ್ತರವನ್ನು ಹೆಚ್ಚಿಸಲು ರೂ. 10ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಬುಧವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಯಿತು.ಸಾಯಗಾಂವ ಸೇತುವೆಯಿಂದ ಮುಂಜಾನೆ 11ಗಂಟೆಗೆ ಆರಂಭವಾದ ಪಾದಯಾತ್ರೆ ಸುಮಾರು 7ಕಿ.ಮೀ ದೂರದವರೆಗೆ ನಡೆಯಿತು. ಕೇಸರ ಜವಳಗಾದ ಕರ್ನಾಟಕ ಮಹಾರಾಷ್ಟ್ರದ ರಾಜ್ಯ ಹೆದ್ದಾರಿಯಲ್ಲಿ ಮಧ್ಯಾಹ್ನ 2ಗಂಟೆವರೆಗೂ ರಸ್ತೆತಡೆ ನಡೆಸಲಾಯಿತು.ವಿಧಾನ ಪರಿಷತ್ ಸದಸ್ಯ ಕಾಜಿ ಅರ್ಷದ್ ಅಲಿ, ರಹೀಂಖಾನ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಅರಳಿ, ತಾಲ್ಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ಎಪಿಎಂಸಿ ಅಧ್ಯಕ್ಷ ಅಶೋಕ ಪಾಟೀಲ, ಪುರಸಭೆ ಅಧ್ಯಕ್ಷೆ ಜೈಶ್ರೀ ಮಾನಕರಿ, ಉಪಾಧ್ಯಕ್ಷ ಚಂದ್ರಕಾಂತ ಪಾಟೀಲ, ವೀರಣ್ಣ ಕಾರಬಾರಿ, ವೈಜಿನಾಥ ಪಾಟೀಲ, ಕೈಲಾಸನಾಥ ಮಿನಕೆರೆ, ವಿಶ್ವನಾಥ ಮೋರೆ, ಅಮೃತರಾವ ಚಿಮಕೋಡೆ, ಮನೋಹರ ನಿಟ್ಟೂರೆ, ಜಮೀಲ್ ಅಹಮ್ಮದ್, ಶಿವರಾಜ ಹಾಸನಕರ್, ಮಲ್ಲಿಕಾರ್ಜುನ ಪ್ರಭಾ, ಸುರೇಶ ಪಾಟೀಲ, ಬಸವರಾಜ ರಿಕ್ಕೆ, ಪ್ರಕಾಶ ಬಿರಾದಾರ ಇದ್ದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.