ಬುಧವಾರ, ಮೇ 18, 2022
25 °C

ಸೇತುವೆ ಕುಸಿದು 27 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾರ್ಜಿಲಿಂಗ್ (ಐಎಎನ್‌ಎಸ್): ಜಿಲ್ಲೆಯ ಬಿಜೋನ್‌ಬರಿ ಪ್ರದೇಶದಲ್ಲಿ, ಜನರಿಂದ ಕಿಕ್ಕಿರಿದಿದ್ದ ಹಳೆಯ ಸೇತುವೆ ಕುಸಿದು ಕನಿಷ್ಠ 27 ಜನ ಮೃತರಾಗಿದ್ದಾರೆ. 60 ಮಂದಿ ಗಾಯಗೊಂಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ 100ಕ್ಕೂ ಹೆಚ್ಚು ಜನ ಮರದ ಸೇತುವೆಯ ಮೇಲೆ ನಿಂತು ಗೋರ್ಖಾ ಜನಮುಕ್ತಿ ಮೋರ್ಚಾದ (ಜಿಜೆಎಂ) ಬಿಮಲ್ ಗುರುಂಗ್ ಅವರ ಭಾಷಣ ಕೇಳುತ್ತಾ ನಿಂತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಸೇತುವೆ ಇತ್ತೀಚಿನ ಭೂಕಂಪದಿಂದ ಇನ್ನಷ್ಟು ಹಾನಿಗೊಳಗಾಗಿತ್ತು. ಅದರ ಒಂದು ಬದಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮತ್ತೊಂದು ಬದಿಯಲ್ಲಿ ಸಭೆ ಆಯೋಜಿಸಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.