ಸೇತುವೆ ನಿಮಾರ್ಣಕ್ಕೆ ಆಗ್ರಹ

7

ಸೇತುವೆ ನಿಮಾರ್ಣಕ್ಕೆ ಆಗ್ರಹ

Published:
Updated:

ಶಿಗ್ಗಾಂವ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲುಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಬಿಸನಳ್ಳಿ ಗ್ರಾಮಸ್ಥರು ಸುಮಾರು ಮೂರು ಗಂಟೆಗೆಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.ಈ ರಸ್ತೆಯಲ್ಲಿ ಒಂದು ತಿಂಗಳಲ್ಲಿ ಮೂರು ಅಪಘಾತಗಳು ಸಂಭವಿಸಿ, ಸಾವು-ನೋವು ಉಂಟಾಗಿವೆ. ಈ ಕುರಿತು ಈಗಾಗಲೇ ಮೇಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.

 

ಕಳೆದ ಭಾನುವಾರ ಬೆಳಿಗ್ಗೆ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಸೋಮವಾರ ಬೆಳಿಗ್ಗೆ ಜಾನುವಾರುವೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ  ಸಂಬಂಧಿಸಿದ ಸಚಿವರ ಜತೆಗೆ ಚರ್ಚಿಸಿ,  ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲುಸೇತುವೆ, ಜೋಡು ರಸ್ತೆ ಹಾಗೂ ಅಲ್ಲದೆ ಬಸ್‌ನಿಲ್ದಾಣ ನಿರ್ಮಿಸುವುದಾಗಿ ಭರವಸೆ ನೀಡಿದರು.ಗ್ರಾಮಸ್ಥರಾದ ವಿರೇಶ ಆಜೂರ, ಜಿ.ಬಿ. ಸವಣೂರ, ಕಲ್ಲಪ್ಪಣ್ಣ ಆಜೂರ, ಆಶೋಕ ಸವಣೂರ, ಉಮೇಶ ಅಂಗಡಿ, ರಾಜನಗೌಡ ಪಾಟೀಲ, ಬಾಪುಗೌಡ ಪಾಟೀಲ,  ವೀರಭದ್ರಪ್ಪ ಅಂಗಡಿ, ಶಿವಪ್ಪಪೂಜಾರ, ಶಂಭುಲಿಂಗಪ್ಪ ಆಜೂರ, ಗದಿಗೆಪ್ಪ ಅಂಗಡಿ, ಮಲ್ಲಪ್ಪ ಸವಣೂರ, ರಾಮನಗೌಡ ಪಾಟೀಲ, ಚಂದ್ರಶೇಖರ ಸದಾಶಿವಪೇಟಿ, ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry