ಭಾನುವಾರ, ಜೂಲೈ 12, 2020
29 °C

ಸೇತುವೆ ನಿರ್ಮಾಣಕ್ಕೆ ಗುತ್ತೇದಾರ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಆಳಂದ: ತಾಲ್ಲೂಕಿನ ತೀರ್ಥ ಗ್ರಾಮದ ಹೊರವಲಯದ ಸಾಲೇಗಾಂವ್- ಅಮರ್ಜ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಹಾಗೂ ಶಾಲಾ ಕೋಣೆ ನಿರ್ಮಾಣಕ್ಕೆ ಶಾಸಕ ಸುಭಾಷ ಗುತ್ತೇದಾರ ಶನಿವಾರ  ಗುದ್ದಲಿ ಪೂಜೆ ನೆರವೇರಿಸಿದರು.ಬಳಿಕ ಗ್ರಾಮಸ್ಥರು ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಗ್ರಾಮೀಣ ಅಭಿವೃದ್ಧಿಗೆ ಹಿಂದೇಟು ಹಾಕುವುದಿಲ್ಲ. ಸರ್ಕಾರದಿಂದ ಬರುವ ಎಲ್ಲ ರೀತಿಯ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಹಂತ ಹಂತವಾಗಿ ವಿತರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಗ್ರಾಮದ ಮಾಳಿಂಗರಾಯ ದೇವಸ್ಥಾನಕ್ಕೆ ಉತ್ತಮ ರಸ್ತೆ, ಆಳಂದಕ್ಕೆ ಸಂಚರಿಸಲು ಡಾಂಬರ್ ರಸ್ತೆ ನಿರ್ಮಿಸಿಕೊಡುವುದಾಗಿ ಹೇಳಿದರು.ಮುಖಂಡ ಅಶೋಕ ಸಾವಳೇಶ್ವರ ಮಾತನಾಡಿದರು. ಶಾಸಕರಿಗೆ ತಾ.ಪಂ. ಮಾಜಿ ಸದಸ್ಯ ಭೀಮರಾವ್ ಪಾಟೀಲ ಗ್ರಾಮದ ಪರ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು.ಲೋಕೋಪಯೋಗಿ ಎಇಇ ಶ್ಯಾಮರಾವ್ ರಾವುರಕರ್, ಎಂಜಿನಿಯರ್ ಮಲ್ಲಿಕಾರ್ಜುನ, ತಾ.ಪಂ. ಸದಸ್ಯ ಮಲ್ಲಣ್ಣ ನಾಗೂರೆ, ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಪೂಜಾರಿ, ಸಾಲೇಗಾಂವದ ಶೇಖರ ವಾಡೆ, ಚಿತಲಿಯ ಅಶೋಕ ಕೋರೆ, ಶಿವು ಸರಾಟೆ, ರಾಜೇಂದ್ರ ಪಾರಾಣೆ, ವಿಜಯಕುಮಾರ ಪಾಟೀಲ, ಹೆಬಳಿಯ ಆನಂದ ಗಾಯಕವಾಡ, ಹಣಮಂತ ಎಸ್. ಪಾಟೀಲ, ಗ್ರಾ.ಪಂ. ಸದಸ್ಯ ಜಗನಾಥ ಬಿರಾದಾರ, ಯಶ್ವಂತರಾವ್ ಪಾಟೀಲ ಅನೇಕರು ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ತುಕ್ಕಾಣಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.