ಸೇತುಸಮುದ್ರಂ: ಸುಪ್ರೀಂ ಕಾಲಾವಕಾಶ

7

ಸೇತುಸಮುದ್ರಂ: ಸುಪ್ರೀಂ ಕಾಲಾವಕಾಶ

Published:
Updated:

ನವದೆಹಲಿ (ಪಿಟಿಐ): ವಿವಾದಿತ ಸೇತುಸಮುದ್ರಂ ಯೋಜನೆ ಅನುಷ್ಠಾನದ ಸಂಬಂಧ ನಿರ್ಧಾರ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಇನ್ನೂ ಆರು ವಾರಗಳ ಕಾಲಾವಕಾಶ ನೀಡಿದೆ.ಪುರಾಣದಲ್ಲಿ ಹೇಳಲಾಗಿರುವ ರಾಮ ಸೇತುವೆಗೆ ಪರ‌್ಯಾಯವಾಗಿ ಮತ್ತೊಂದು ಸೇತುವೆಯನ್ನು ನಿರ್ಮಿಸುವುದು ಆರ್ಥಿಕವಾಗಿ ಅಷ್ಟೇ ಅಲ್ಲ, ಪರಿಸರದ ದೃಷ್ಟಿಯಿಂದಲೂ ಸೂಕ್ತವಲ್ಲ ಎಂದು ಉನ್ನತ ಮಟ್ಟದ ಸಮಿತಿ ನೀಡಿರುವ ವರದಿಯ ಹಿನ್ನೆಲೆಯಲ್ಲಿ ಎಚ್.ಎಲ್. ದತ್ತು ಹಾಗೂ ಸಿ.ಕೆ. ಪ್ರಸಾದ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಕಾಲಾವಕಾಶ ನೀಡಿದ್ದು ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿದೆ.ಪೌರಾಣಿಕ ಹಿನ್ನೆಲೆಯ ರಾಮ ಸೇತುವೆಗೆ ಪರ‌್ಯಾಯವಾಗಿ ಮತ್ತೊಂದು ಸೇತುವೆ ಕಟ್ಟುವುದರಿಂದ ಈ ಸೇತುವೆಗೆ ಧಕ್ಕೆಯಾಗುವುದಲ್ಲದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದು ಎಂದು ಆರೋಪಿಸಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry