ಸೇನಾ ಅಕಾಡೆಮಿಗೆ ಭೇಟಿ ನೀಡಿದ ದೋನಿ

7

ಸೇನಾ ಅಕಾಡೆಮಿಗೆ ಭೇಟಿ ನೀಡಿದ ದೋನಿ

Published:
Updated:
ಸೇನಾ ಅಕಾಡೆಮಿಗೆ ಭೇಟಿ ನೀಡಿದ ದೋನಿ

ಚೆನ್ನೈ (ಪಿಟಿಐ): ಸಮವಸ್ತ್ರ ಧರಿಸಿದವರ ನಡುವೆ ಕ್ರಿಕೆಟ್ ತಾರೆಯ ಮಿಂಚು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದರೂ ಯೋಧರ ನಡುವೆ ಯೋಧ!ಹೌದು; ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರು ಬುಧವಾರ ಇಲ್ಲಿನ ಸೇನಾ ಅಕಾಡೆಮಿಗೆ ಭೇಟಿ ನೀಡಿದಾಗ ಭೂಸೇನೆಯ ಅಧಿಕಾರಿಗಳು ತೊಡುವಂಥ ಪೋಷಾಕು ಧರಿಸಿದ್ದರು. ತಮ್ಮನ್ನು ಅಭಿನಂದಿಸಲು ಬಂದವರಿಗೆ ಮಂದಹಾಸದಿಂದಲೇ ಪ್ರತಿಯಾಗಿ ಕೃತಜ್ಞತೆ ಸಲ್ಲಿಸಿದರು.ಕಳೆದ ವರ್ಷ ಪ್ರಾಂತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ರ‌್ಯಾಂಕ್ ಸ್ವೀಕರಿಸಿದ್ದ `ಮಹಿ~ ತಮ್ಮ ಮಾತುಗಳಿಂದ ಇಲ್ಲಿನ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಯುವಕರ ಹುಮ್ಮಸ್ಸು ಹೆಚ್ಚಿಸಿದರು. 

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿರುವ ದೋನಿ ಅಭ್ಯಾಸದ ವೇಳೆ ಬಿಡುವು ಮಾಡಿಕೊಂಡು ಈ ಅಕಾಡೆಮಿಗೆ ತೆರಳಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry