ಸೇನಾ ಉಪ ಮುಖ್ಯಸ್ಥರಾಗಿ ಮುಧೋಳದ ಹಲಗಲಿ ನೇಮಕ

7

ಸೇನಾ ಉಪ ಮುಖ್ಯಸ್ಥರಾಗಿ ಮುಧೋಳದ ಹಲಗಲಿ ನೇಮಕ

Published:
Updated:
ಸೇನಾ ಉಪ ಮುಖ್ಯಸ್ಥರಾಗಿ ಮುಧೋಳದ ಹಲಗಲಿ ನೇಮಕ

ನವದೆಹಲಿ: ಬಾಗಲಕೋಟೆ ಜಿಲ್ಲೆ ಮುಧೋಳದ ಲೆ. ಜ. ರಮೇಶ್ ಹಲಗಲಿ ಅವರಿಗೆ ಸೇನೆಯ ಉಪ ಮುಖ್ಯಸ್ಥರ ಹುದ್ದೆಗೆ ಸೋಮವಾರ ಬಡ್ತಿ ನೀಡಿ ನೇಮಕ ಮಾಡಲಾಗಿದೆ. ಸೇನೆಯ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಹಲಗಲಿ ಒಬ್ಬರಾಗಿದ್ದಾರೆ.



`ಸುಖ್ನಾ ಭೂ ಹಗರಣ~ದಲ್ಲಿ ಆರೋಪಿತರಾಗಿದ್ದ ಹಲಗಲಿ ಅವರಿಗೆ ಸೇನೆ `ಕ್ಲೀನ್ ಚಿಟ್~ ನೀಡಿದ ಬಳಿಕ ಸಂಪುಟ ನೇಮಕಾತಿ ಸಮಿತಿ ಉಪ ಮುಖ್ಯಸ್ಥರ ಹುದ್ದೆಗೆ ಅವರ ಹೆಸರು ಪರಿಗಣಿಸಿ ನೇಮಕ ಮಾಡಿದೆ. ಮಾಹಿತಿ ವ್ಯವಸ್ಥೆ ಹಾಗೂ ತರಬೇತಿ ವಿಭಾಗದ ಹೊಣೆ ಹೊತ್ತಿರುವ ಇವರು ಸೇನೆಯ ಇಬ್ಬರು ಉಪ ಮುಖ್ಯಸ್ಥರ ಪೈಕಿ ಒಬ್ಬರು. ಇದುವರೆಗೆ ಅವರು ಮಿಲಿಟರಿಕೇಂದ್ರ ಕಚೇರಿಯಲ್ಲಿ ತರಬೇತಿ ಮುಖ್ಯಸ್ಥರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry