ಸೇನಾ ದಾಳಿ:ಅಮೆರಿಕ ಕಾಂಗ್ರೆಸ್ ನಿರ್ಧಾರ ಅನಿಶ್ಚಿತ

7

ಸೇನಾ ದಾಳಿ:ಅಮೆರಿಕ ಕಾಂಗ್ರೆಸ್ ನಿರ್ಧಾರ ಅನಿಶ್ಚಿತ

Published:
Updated:

ವಾಷಿಂಗ್ಟನ್ (ಪಿಟಿಐ): ರಾಸಾಯನಿಕ ಅಸ್ತ್ರಗಳನ್ನು ಬಳಸಿರುವ ಆರೋಪ ಹೊತ್ತಿರುವ ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಅಮೆರಿಕ ಕಾಂಗ್ರೆಸ್ ಒಪ್ಪಿಗೆ ಸೂಚಿಸಬಹುದು ಅಥವಾ ಸೂಚಿಸದೆಯೂ ಇರಬಹುದು ಎಂದು ರಿಪಬ್ಲಿಕನ್ ಪಕ್ಷದ ಹಿರಿಯ ಸೆನೆಟರ್ ರ‍್ಯಾಂಡ್ ಪೌಲ್ ಹೇಳಿದ್ದಾರೆ.ಸಿರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲು ಅವಕಾಶ ನೀಡುವಂತೆ ಕೋರಿ ಅಧ್ಯಕ್ಷ ಬರಾಕ್ ಒಬಾಮ ಕಾಂಗ್ರೆಸ್‌ಗೆ ಮನವಿ ಮಾಡಿದ್ದಾರೆ.ಅಮೆರಿಕದ ಕೆಳಮನೆಯಾಗಿರುವ ಜನಪ್ರತಿನಿಧಿಗಳ ಸಭೆಯಲ್ಲಿ ಪ್ರತಿಪಕ್ಷವಾದ ರಿಪಬ್ಲಿಕನ್ ಬಹುಮತ ಹೊಂದಿದೆ.

ಆದರೆ, ಮೇಲ್ಮನೆಯಾಗಿರುವ ಸೆನೆಟ್‌ನಲ್ಲಿ ಒಬಾಮ ಅವರ ಡೆಮಾಕ್ರಟಿಕ್ ಪಕ್ಷಕ್ಕೆ ಸಂಪೂರ್ಣ ಬಹುಮತವಿದ್ದು, ಅವರ ಪ್ರಸ್ತಾವನೆಯು ಯಾವುದೇ ಅಡತಡೆಯಿಲ್ಲದೆ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.`ಸಿರಿಯಾ ವಿರುದ್ಧ ಯುದ್ಧ ಸಾರುವುದಕ್ಕೆ ಜನಪ್ರತಿನಿಧಿಗಳ ಸಭೆ ಒಪ್ಪುವ ಸಾಧ್ಯತೆ `50-50'ರಷ್ಟಿದೆ' ಎಂದು ಪೌಲ್ ಹೇಳಿದ್ದಾರೆ.

`ಸೆನೆಟ್‌ನಲ್ಲಿ ಒಬಾಮ ಮಾಡಿರುವ ಪ್ರಸ್ತಾವನೆ ಅಂಗೀಕಾರಗೊಳ್ಳಬಹುದು. ಆದರೆ ಜನಪ್ರತಿನಿಧಿಗಳ ಸಭೆಯಲ್ಲಿ ಈ ಪ್ರಸ್ತಾವನೆ ಸಂಬಂಧ ಮತ ಪಡೆಯುವುದು ಕಷ್ಟವಾಗಲಿದೆ' ಎಂದು ಪೌಲ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry