ಸೇನಾ ದಾಳಿ ಸ್ಥಗಿತ ಸಾಧ್ಯತೆ

7

ಸೇನಾ ದಾಳಿ ಸ್ಥಗಿತ ಸಾಧ್ಯತೆ

Published:
Updated:

ವಾಷಿಂಗ್ಟನ್ (ಪಿಟಿಐ): ಸಿರಿಯಾ ಮೇಲಿನ ದಾಳಿಗೆ ಅಮೆರಿಕ ಸಂಸತ್ ಕಾಂಗ್ರೆಸ್‌ನಿಂದ ಸಾಕಷ್ಟು ಬೆಂಬಲ ಸಿಗುವ ಬಗ್ಗೆ ಅನಿಶ್ವಿತತೆ ಮುಂದುವರಿದಿದ್ದು, ಅಧ್ಯಕ್ಷ ಬಷರ್ ಅಲ್ ಅಸಾದ್ ನೇತೃತ್ವದ ಆಡಳಿತ ತಮ್ಮ ರಾಸಾಯನಿಕ ಅಸ್ತ್ರಗಳ ದಾಸ್ತಾನನ್ನು ಅಂತರರಾಷ್ಟ್ರೀಯ ಹಿಡಿತಕ್ಕೆ ನೀಡಿದಲ್ಲಿ ಸಂಭಾವ್ಯ ಸೇನಾ ದಾಳಿಯನ್ನು `ನಿಶ್ಚಿತವಾಗಿ' ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮಂಗಳವಾರ ತಿಳಿಸಿದ್ದಾರೆ.

'ಸಿರಿಯಾ ಅಧ್ಯಕ್ಷ ಅಸಾದ್ ಅವರು ರಾಸಾಯನಿಕ ಅಸ್ತ್ರಗಳ ದಾಸ್ತಾನು ಬಿಟ್ಟುಕೊಟ್ಟಲ್ಲಿ ಸೇನಾ ದಾಳಿಯನ್ನು ನಿಶ್ಚಿತವಾಗಿ ಸ್ಥಗಿತಗೊಳಿಸಲಾಗುವುದು' ಎಂದು ಒಬಾಮಾ ಎಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ.ಅಸಾದ್ ಅವರು ರಾಸಾಯನಿಕ ಅಸ್ತ್ರಗಳನ್ನು  ಅಂತರರಾಷ್ಟ್ರೀಯ ಹಿಡಿತಕ್ಕೆ ನೀಡಿದರೇ ಯುದ್ಧ ಸ್ಥಗಿತಗೊಳಿಸುವಿರಾ ಎಂದು ಪ್ರಶ್ನೆಗೆ ಒಬಾಮಾ `ಒಂದು ವೇಳೆ  ಅದು ಸಾಧ್ಯವಾದಲ್ಲಿ ನಿಶ್ಚಿತವಾಗಿಯೂ' ಎಂದು ಪ್ರತಿಕ್ರಿಯಿಸಿದ್ದಾರೆ.

`ಅದುವೇ ನಮ್ಮ ರಾಷ್ಟ್ರೀಯ ಭದ್ರತಾ ಹಿತಾಸಕ್ತಿ. ನಾವು ಯುದ್ಧವಿಲ್ಲದೇ ಅದನ್ನು ಸಾಧಿಸುವುದಾದರೇ ಅದಕ್ಕೇ  ನನ್ನ ಹೆಚ್ಚಿನ ಆದ್ಯತೆ. ಇದೀಗ ತುರ್ತು ಸ್ಪಂದನೆಯೇ ಸಿಗುತ್ತದೆಯೇ  ಎಂಬುದೇ ಪ್ರಮುಖ' ಎಂದು ಒಬಾಮಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry