ಸೋಮವಾರ, ಏಪ್ರಿಲ್ 19, 2021
24 °C

ಸೇನಾ ಭರ್ತಿ ರ್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಮಂಗಳೂರಿನ ಆರ್ಮಿ ರಿಕ್ರೂಟಿಂಗ್ ಕಚೇರಿ ವತಿಯಿಂದ ಜನರಲ್ ಡ್ಯೂಟಿ, (ಡಿಎಸ್‌ಸಿ), ಎಸ್‌ಕೆಟಿ ಟೆಕ್ನಿಕಲ್, ನರ್ಸಿಂಗ್ ಮತ್ತು ಕ್ಲರ್ಕ್ ಹುದ್ದೆಗಳಿಗಾಗಿ ಸೇನಾ ಭರ್ತಿ ರ್ಯಾಲಿಯನ್ನು ಏಪ್ರಿಲ್ 4 ರಿಂದ 8ರವರೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.ಪಿಯುಸಿ ಅಥವಾ ತತ್ಸಮಾನ ಹಾಗೂ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಹದಿನೇಳುವರೆ ವರ್ಷದಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಎಲ್ಲ ಮೂಲ ದಾಖಲೆಗಳು, 12 ಪಾಸ್‌ಪೋರ್ಟ್ ಅಳತೆ ಭಾವಚಿತ್ರಗಳು, ನಿಗದಿತ ನಮೂನೆಯಲ್ಲಿ ಅಫಿಡವಿಟ್, ರಹವಾಸಿ ಪ್ರಮಾಣ ಪತ್ರ, ರಿಲೇಶನ್‌ಶಿಪ್ ಸರ್ಟಿಫಿಕೇಟ್ ಮತ್ತು ಎನ್‌ಸಿಸಿ ಸರ್ಟಿಫಿಕೇಟ್‌ಗಳೊಂದಿಗೆ ಹಾಜರಾಗಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.