ಸೇನಾ ಭರ್ತಿ ರ‌್ಯಾಲಿ: ಅಭ್ಯರ್ಥಿಗಳಿಗೆ ಸೂಚನೆ

7

ಸೇನಾ ಭರ್ತಿ ರ‌್ಯಾಲಿ: ಅಭ್ಯರ್ಥಿಗಳಿಗೆ ಸೂಚನೆ

Published:
Updated:

ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮೈದಾನದಲ್ಲಿ ಅಕ್ಟೋಬರ್ 3ರಿಂದ 9ರವರೆಗೆ  ಸೇನಾ ಭರ್ತಿ ರ‌್ಯಾಲಿ ನಡೆಯಲಿದೆ.ರ‌್ಯಾಲಿಗೆ ಹಾಜರಾಗುವ ಅಭ್ಯರ್ಥಿಗಳು ನಿಗದಿತ ದಿನಕ್ಕಿಂದ ಒಂದು ದಿನ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅ 3ರಂದು ಪಾಲ್ಗೊಳ್ಳುವ ಅಭ್ಯರ್ಥಿಗಳು 2ರಂದು ಮಧ್ಯಾಹ್ನ 3ರ ನಂತರ ನೋಂದಾಯಿಸಿಕೊಳ್ಳಬೇಕು. ಈ ಪರೀಕ್ಷೆಯು ದೈಹಿಕ ಅರ್ಹತೆ ಮತ್ತು ವೈದ್ಯಕೀಯ ಪರೀಕ್ಷೆ ಒಳಗೊಂಡಿರುತ್ತದೆ.ಪರೀಕ್ಷೆಯ ವೇಳಾಪಟ್ಟಿ: ಅ 3ರಂದು ಸೋಲ್ಜರ್ ಟೆಕ್ನಿಕ್ ಮತ್ತು ನರ್ಸಿಂಗ್ ಅಸಿಸ್ಟೆಂಟ್; ರಾಜ್ಯದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು.ಅ 4ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಕೊಡಗು, ಉಡುಪಿ, ವಿಜಾಪುರ, ಮತ್ತು ಧಾರವಾಡ ಜಿಲ್ಲಾ ಅಭ್ಯರ್ಥಿಗಳಿಗೆ ಮಾತ್ರ. ಅ 5ರಂದು ಸೋಲ್ಜರ್ ಜಿಡಿ ಮತ್ತು ಸೋಲ್ಜರ್ ಟ್ರೇಡ್ಸ್‌ಮೆನ್ ಎಸ್‌ಎಸ್‌ಎಲ್‌ಸಿ ಮತ್ತು 8ನೇ ತರಗತಿ ಪಾಸ್ (ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು); 6ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ. 7ರಂದು ಹಾಸನ, ಚಿತ್ರದುರ್ಗ, ದಾವಣಗೆರೆ; 8ರಂದು ವಿಜಾಪುರ ಮತ್ತು ಹೊರಜಿಲ್ಲೆ ಹಾಗೂ 9ರಂದು ಧಾರವಾಡ ಜಿಲ್ಲೆ.ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಮಾತ್ರ ಲಿಖಿತ ಪರೀಕ್ಷೆ ನಡೆಸಲಾಗುವುದು. ಅಭ್ಯರ್ಥಿಯು 18 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ ಪಾಲಕರಿಂದ ಶಪಥ ಪತ್ರ, ಸರ್ಕಾರದ ಅಥವಾ ಸಂಸ್ಥೆಯಿಂದ ಪಡೆದ ಕ್ರೀಡಾ ಪ್ರಮಾಣ ಪತ್ರ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0836-2440176 ಅನ್ನು ಸಂಪರ್ಕಿಸಲು ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಈಶ್ವರ ಕೋಡಳ್ಳಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry