ಭಾನುವಾರ, ಮೇ 16, 2021
22 °C

ಸೇನಾ ಭರ್ತಿ ರ‍್ಯಾಲಿ: ಜಿಲಾಡ್ಲಳಿತದಿಂದ ಸೂಕ್ತ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಸೇನಾ ಭರ್ತಿ ರ‍್ಯಾಲಿಗೆ ಹೊರ ಜಿಲ್ಲೆಗಳಿಂದ ಆಗಮಿಸಿರುವ ಅಭ್ಯರ್ಥಿಗಳ ರಾತ್ರಿ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲು ಜಿಲ್ಲಾ ಆಡಳಿತ ನಗರದ 11 ಶಾಲಾ ಹಾಗೂ ಕಾಲೇಜುಗಳಲ್ಲಿ ಹಾಗೂ ಕೊಟನೂರ ಮಠದಲ್ಲಿ ವಸತಿ ವ್ಯವಸ್ಥೆ ಮತ್ತು ಶುದ್ಧ ಕುಡಿಯುವ ನೀರು ಪೂರೈಸಿದೆ.ಮುಂಜಾಗೃತಾ ಕ್ರಮವಾಗಿ ಕ್ರೀಡಾಂಗಣದ ಸುತ್ತಲು ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ. ಸೊಳ್ಳೆ ಹಾವಳಿ ನಿಯಂತ್ರಣಕ್ಕೆ ಔಷಧವನ್ನು ಸಿಂಪಡಿಸಲಾಗಿದೆ. ಅಲದ್ಲೇ ಒಬ್ಬ ವೈದ್ಯ, ಸಹಾಯಕ ಸಿಬ್ಬಂದಿ ಮತ್ತು ಅಂಬುಲೆನ್ಸ್ ಸಮೇತ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಸ್ಥಳದಲಿಯ್ಲೌ ಮಾಡಲಾಗಿದೆ.ಸೇನಾ ಭರ್ತಿ ರ‍್ಯಾಲಿಗೆ ಬರುವ ಅಭ್ಯರ್ಥಿಗಳು ಕನ್ನಡದಲ್ಲಿ ತರುವ ಪ್ರಮಾಣ ಪತ್ರಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಅದನ್ನು ದೃಢೀಕರಿಸಲು ಪ್ರೌಢಶಿಕ್ಷಣ ಇಲಾಖೆಯಿಂದ ಇಬ್ಬರು ಮುಖ್ಯ ಶಿಕ್ಷಕರು ಹಾಗೂ ಪದವಿ  ಪೂರ್ವ ಶಿಕ್ಷಣ ಇಲಾಖೆಯಿಂದ ಇಬ್ಬರು ಉಪನ್ಯಾಸಕರನ್ನು ನಿಯೋಜಿಸಲಾಗಿದೆ.ಅಭ್ಯರ್ಥಿಗಳು ಕನ್ನಡದಲ್ಲಿ ತರುವ ಜಾತಿ ಹಾಗೂ ವಾಸಸ್ಥಳ ಪ್ರಮಾಣ ಪತ್ರಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ದೃಢೀಕರಿಸಲು ಕಂದಾಯ ಇಲಾಖೆಯ ಉಪ ತಹಶೀಲ್ದಾರರನ್ನು ನಿಯೋಜಿಸಲಾಗಿದೆ.ಇದುವರೆಗೂ 14 ಸಾವಿರ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದು, ಅವರಲ್ಲಿ 7500 ಮಂದಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಅದರಲ್ಲಿ 1400 ಮಂದಿ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಅವರಲಿ ್ಲಸುಮಾರು 600 ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹರಾಗಿರುತ್ತಾರೆ.ಇನ್ನೂಳಿದ ಎರಡು ದಿನದ ರ‍್ಯಾಲಿಯಲ್ಲಿ ಸುಮಾರು 4 ಸಾವಿರ ಅಭ್ಯರ್ಥಿಗಳು ಭಾಗವಹಿಸಬಹುದು ಎಂದು ಅಂದಾಜಿಸಲಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವ ಹೈದರಾಬಾದ್ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ ಎಂದು  ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆಯ ಉಪ ನಿರ್ದೇಶಕ ಡಾ.ದೊಡ್ಡಪ್ಪ ಹೂಗಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಶಾಲಾ, ಕಾಲೇಜುಗಳಲ್ಲಿ ವಸತಿ ಸೌಲಭ್ಯ

ಗುಲ್ಬರ್ಗ:  ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಜೂನ್ 13ರ ವರೆಗೆ ನಡೆಯುವ ಸೇನಾ ಭರ್ತಿ ರ‍್ಯಾಲಿಗೆ ಹೊರ ಜಿಲ್ಲೆಯಿಂದ ಆಗಮಿಸಿರುವ ಅಭ್ಯರ್ಥಿಗಳಿಗೆ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ರಾತ್ರಿ  ವೇಳೆ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಜಿಲ್ಲಾ ಆಳಿತವು ವಸತಿ ಸೌಲಭ್ಯ ಕಲ್ಪಿಸಿದೆ.ಶಾಲಾ, ಕಾಲೇಜುಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆ ಇಂತಿದೆ:

ವಿಜಯ ವಿದ್ಯಾಲಯ ಪ್ರೌಢಶಾಲೆ, ಸರ್ಕಾರಿ ಕನ್ಯಾ ಪದವಿ ಪೂರ್ವ ಕಾಲೇಜು (9448552283), ಸರ್ಕಾರಿ ಪ್ರೌಢಶಾಲೆ ಪೊಲೀಸ್ ಕಾಲೋನಿ (9591895904), ರೋಟರಿ ಕ್ಲಬ್ ಪ್ರೌಢಶಾಲೆ (9901168606), ಎನ್‌ವಿ ಕನ್ಯಾ ಪ್ರೌಢಶಾಲೆ (9632461390),ಎನ್‌ವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ (9342357658),  ಎನ್‌ವಿ ಬಾಲಕರ ಪ್ರೌಢಶಾಲೆ (9886206233), ಎಸ್‌ಆರ್‌ಎಸ್ ಮೆಹತಾ ಪ್ರೌಢಶಾಲೆ  (9448459949), ಮಹಿಳಾ ಸೇವಾ ಸಮಾಜ ಪ್ರೌಢಶಾಲೆ (9900174152) ಮತ್ತು ಸೇಂಟ್ ಮೇರಿ ಪ್ರೌಢಶಾಲೆ (08472 - 240872) ಗಳಲ್ಲಿ ವಸತಿ ಸೌಲಭ್ಯಗಳನ್ನು ಒದಗಿಸಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆಯ ಉಪನಿರ್ದೇಶಕ ದೊಡ್ಡಪ್ಪ ಹೂಗಾರ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.