ಬುಧವಾರ, ಡಿಸೆಂಬರ್ 11, 2019
24 °C

ಸೇನಾ ಮುಖ್ಯಸ್ಥರ ವಯಸ್ಸು: ಮನವಿಗೆ ಸುಪ್ರೀಂ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇನಾ ಮುಖ್ಯಸ್ಥರ ವಯಸ್ಸು: ಮನವಿಗೆ ಸುಪ್ರೀಂ ನಕಾರ

ನವದೆಹಲಿ (ಐಎಎನ್ಎಸ್): ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಜನ್ಮದಿನಾಂಕವನ್ನು 1951ರ ಮೇ 10 ಎಂಬುದಾಗಿ ಮರುನಮೂದಿಸುವಂತೆ ಕೋರಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿತು.ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ಸುಪ್ರಿಂಕೋರ್ಟ್ ಪೀಠವು, ವ್ಯಕ್ತಿಯೊಬ್ಬರ ಜನ್ಮದಿನಾಂಕವನ್ನು ಸಂಘಟನೆಯೊಂದು ಎತ್ತಿಕೊಂಡು ಈ ರೀತಿ ರಿಟ್ ಅರ್ಜಿ ಸಲ್ಲಿಸುವಂತಿಲ್ಲವಾದ ಕಾರಣ ಗ್ರೆನೇಡಿಯರ್ಸ್ ಅಸೋಸಿಯೇಷನ್ (ಮಾಜಿ ಯೋಧರು) ಸಲ್ಲಿಸಿದ ರಿಟ್ ಅರ್ಜಿ ನಮ್ಮ ದೃಷ್ಟಿಯಲ್ಲಿ ವಿಚಾರಣಾಯೋಗ್ಯವಲ್ಲ~ ಎಂದು ಹೇಳಿತು.ಜನರಲ್ ವಿ.ಕೆ. ಸಿಂಗ್ ಅವರ ಅರ್ಜಿ ಈಗಾಗಲೇ ನ್ಯಾಯಾಲಯದ ಮುಂದೆ ಬಾಕಿ ಇರುವುದರಿಂದ ಅರ್ಜಿಯ ಅರ್ಹತೆ ಬಗ್ಗೆ ಯಾವುದೇ ಅಭಿಪ್ರಾಯವನ್ನೂ ತಾನು ವ್ಯಕ್ತ ಪಡಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿತು. ತಮ್ಮ ಜನ್ಮ ದಿನಾಂಕವನ್ನು 1950ಕ್ಕೆ ಬದಲಾಗಿ 1951 ಮೇ 10 ಎಂಬುದಾಗಿ ಮರು ನಮೂದಿಸಿ ಅಧಿಕೃತ ದಾಖಲೆಗಳನ್ನು ಸರಿಪಡಿಸುವಂತೆ ಕೋರಿ ಜನರಲ್ ಸಿಂಗ್ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದ್ದಾರೆ.

ಪ್ರತಿಕ್ರಿಯಿಸಿ (+)