ಸೇನಾ ಮುಖ್ಯಸ್ಥರ ವಯೋವಿವಾದ: ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

7

ಸೇನಾ ಮುಖ್ಯಸ್ಥರ ವಯೋವಿವಾದ: ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

Published:
Updated:
ಸೇನಾ ಮುಖ್ಯಸ್ಥರ ವಯೋವಿವಾದ: ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ

ನವದೆಹಲಿ (ಸುದ್ದಿ ಸಂಸ್ಥೆಗಳು): ಸೇನಾ ಮುಖ್ಯಸ್ಥ  ಜನರಲ್ ವಿ.ಕೆ. ಸಿಂಗ್ ಅವರ ಕಾನೂನುಸಮ್ಮತ ದೂರನ್ನು ಸರ್ಕಾರವು ತಿರಸ್ಕರಿಸಿದ ವಿಧಾನವು ~ದೋಷಯುಕ್ತ ವಿವೇಚನೆ~ಯಂತೆ ಭಾಸವಾಗುತ್ತಿದೆ~ ಎಂಬುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳುವುದರೊಂದಿಗೆ ಜನರಲ್ ಸಿಂಗ್ ಅವರ ತಮ್ಮ ವಯಸ್ಸಿಗೆ ಸಂಬಂಧಿಸಿದ ಕಾನೂನು ಸಮರದಲ್ಲಿ ಮೊದಲ ಸುತ್ತಿನ ಜಯಗಳಿಸಿದಂತೆ ಕಂಡು ಬರುತ್ತಿದೆ.ಫೆಬ್ರುವರಿ 10ಕ್ಕೆ ವಿಷಯದ ವಿಚಾರಣೆಗೆ ದಿನ ನಿಗದಿ ಪಡಿಸಿದ ನ್ಯಾಯಾಲಯವು ~ಸರ್ಕಾರವು ತನ್ನ 30 ಡಿಸೆಂಬರ್ 2011ರ ಆದೇಶವನ್ನು ಹಿಂತೆಗೆದುಕೊಳ್ಳಬಯಸುವುದೇ ಎಂದು ಪ್ರಶ್ನಿಸಿದೆ.ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಜನರಲ್ ಸಿಂಗ್ ಅವರು ಸಲ್ಲಿಸಿದ್ದ ಕಾಯ್ದೆಬದ್ಧ ದೂರನ್ನು ತಳ್ಳಿಹಾಕಿ ಡಿಸೆಂಬರ್ 30ರಂದು ಆದೇಶ ಹೊರಡಿಸಿದ್ದರು. ಸೇನಾ ದಾಖಲೆಗಳಲ್ಲಿ ತಮ್ಮ ಜನ್ಮದಿನಾಂಕವನ್ನು 10 ಮೇ 1950ಕ್ಕೆ ಬದಲಾಗಿ 10 ಮೇ 1951 ಎಂಬುದಾಗಿ ಪರಿಗಣಿಸಬೇಕು ಎಂಬುದಾಗಿ ಆಗ್ರಹಿಸಿ ಜನರಲ್ ಸಿಂಗ್ ದೂರು ನೀಡಿದ್ದರು.ನ್ಯಾಯಮೂರ್ತಿಗಳಾದ ಆರ್. ಎಂ. ಲೋಧಾ ಮತ್ತು ಎಚ್. ಎಲ್. ಗೋಖಲೆ ಅವರನ್ನು ಒಳಗೊಂಡ ಪೀಠವು ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದುದಲ್ಲದೆ ಜನ್ಮ ದಿನಾಂಕವನ್ನು 10 ಮೇ 1950 ಎಂಬುದಾಗಿ ಎತ್ತಿ ಹಿಡಿದು 21 ಜುಲೈ 2011ರಂದು ಹೊರಡಿಸಿದ ರಕ್ಷಣಾ ಸಚಿವಾಲಯದ ಆದೇಶವು ತನ್ನ ದೃಷ್ಟಿಯಲ್ಲಿ ಅಟಾರ್ನಿ ಜನರಲ್ ಅವರ ಅಭಿಪ್ರಾಯವನ್ನು ಆಧರಿಸಿದ್ದಾಗಿತ್ತು. ಕಾನೂನುಬದ್ಧ ದೂರಿಗೆ ಸಂಬಂಧಿಸಿದಂತೆ ಡಿಸೆಂಬರ್ 30ರಂದು ಹೊರಡಿಸಲಾದ ಡಿಸೆಂಬರ್ 30ರ ಆದೇಶವೂ ಇದೇ ರೀತಿಯದು ಎಂದು ಅಭಿಪ್ರಾಯಪಟ್ಟಿತು.ಸರ್ಕಾರವು ಡಿಸೆಂಬರ್ 30ರ ಆದೇಶವನ್ನು ಹಿಂತೆಗೆದುಕೊಳ್ಳುವುದೇ ಎಂಬುದಾಗಿ ತಾನು ತಿಳಿಯಬಯಸುವುದಾಗಿ  ಪೀಠವು ಹೇಳಿದಾಗ ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅವರು ವಿಷಯಕ್ಕೆ ಸಂಬಂಧಿಸಿದಂತೆ ತಾವು ಸರ್ಕಾರದಿಂದ ಸೂಚನೆ ಪಡೆಯುವುದಾಗಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry