ಸೇನೆಯ ಗುಂಡಿಗೆ ಉಗ್ರರು ಬಲಿ

ಶುಕ್ರವಾರ, ಜೂಲೈ 19, 2019
24 °C

ಸೇನೆಯ ಗುಂಡಿಗೆ ಉಗ್ರರು ಬಲಿ

Published:
Updated:

ಶ್ರೀನಗರ (ಐಎಎನ್‌ಎಸ್): ಉಗ್ರರು ಹಾಗೂ ಸೇನೆ ನಡುವೆ ನಡೆದ  ಗುಂಡಿನ ಚಕಮುಕಿಯಲ್ಲಿ ಲಷ್ಕರ್-ಇ-ತೊಯ್ಬಾದ ಪ್ರಮುಖ ನಾಯಕ ಸೇರಿದಂತೆ ಮೂವರು  ಪ್ರತ್ಯೇಕತವಾದಿ ಗೆರಿಲ್ಲಾ ಉಗ್ರರು ಬಲಿಯಾದ ಘಟನೆ  ಜಮ್ಮು- ಕಾಶ್ಮೀರದ ಸಪೊರಾ ನಗರದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಈ ಪ್ರದೇಶದಲ್ಲಿ ಪ್ರತ್ಯೇಕತಾವಾದಿಗಳು ಇದ್ದಾರೆ ಎಂಬ ಖಚಿತ ಮಾಹಿತಿಯ ಮೇಲೆ ರಾಷ್ಟ್ರೀಯ ರೈಫಲ್ ಪಡೆ ಹಾಗೂ ಪೊಲೀಸರು ಗುರುವಾರ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸರ ಗುಂಡಿಗೆ ಬಲಿಯಾಗಿರುವ ಎಲ್‌ಇಟಿ ಕಮಾಂಡರ್‌ನನ್ನು  ಅಬ್ದುಲ್ ಬಾಬರ್ ಎಂದು ಗುರುತಿಸಲಾಗಿದ್ದು ಈತ ವಿದೇಶಿ ಎಂದು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry