ಸೇನೆ ನಿಯಂತ್ರಣಕ್ಕೆ ನೈರೋಬಿ ಶಾಪಿಂಗ್ ಮಾಲ್: ಒತ್ತೆಯಾಳುಗಳ ರಕ್ಷಣೆ?

7

ಸೇನೆ ನಿಯಂತ್ರಣಕ್ಕೆ ನೈರೋಬಿ ಶಾಪಿಂಗ್ ಮಾಲ್: ಒತ್ತೆಯಾಳುಗಳ ರಕ್ಷಣೆ?

Published:
Updated:

ನೈರೋಬಿ (ಪಿಟಿಐ):  ವೆಸ್ಟ್‌ಗೇಟ್ ಶಾಪಿಂಗ್ ಮಾಲ್ ಅನ್ನು ಸಂಪೂರ್ಣವಾಗಿ ಸುತ್ತುವರೆದಿರುವ ಕೀನ್ಯಾ ಸೇನೆಯು ಎಲ್ಲಾ ಉಗ್ರರನ್ನು ಹತ್ಯೆಮಾಡಲಾಗಿದ್ದು  ಮಾಲ್‌ನ ಮೂರು ಅಂತಸ್ತುಗಳಲ್ಲಿದ್ದ ಸಾರ್ವಜನಿಕರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.ಕಳೆದ ಮೂರು ದಿನಗಳಿಂದ ಇಸ್ಲಾಮಿಕ್ ಉಗ್ರರ ಹಿಡಿತದಲ್ಲಿದ್ದ ಶಾಪಿಂಗ್ ಮಾಲ್ ಈಗ ಸೇನೆಯ ನಿಯಂತ್ರಣದಲ್ಲಿದೆ ಎಂದು ಕೀನ್ಯಾ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.ನಾಲ್ಕನೆ ಅಂತಸ್ತಿನಲ್ಲಿ ಒಂದಿಬ್ಬರು ಉಗ್ರರು ಮತ್ತು ಕೆಲವು ನಾಗರೀಕರು ಇರುವ ಶಂಕೆ ಇದ್ದು ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.ಗಾಯಗೊಂಡಿರುವ ಸಾರ್ವಜನಿಕರನ್ನು  ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಡುಗಡೆಯಾದವರಲ್ಲಿ ವಿದೇಶಿಯರು ಸೇರಿದ್ದಾರೆ ಎಂದು ಕೀನ್ಯಾ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry