ಮಂಗಳವಾರ, ಮೇ 18, 2021
22 °C

ಸೇನ್: ವಾಗ್ದಂಡನೆ ಪ್ರಕ್ರಿಯೆ ಕೈಬಿಟ್ಟ ಲೋಕಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇನ್: ವಾಗ್ದಂಡನೆ ಪ್ರಕ್ರಿಯೆ ಕೈಬಿಟ್ಟ ಲೋಕಸಭೆ

ನವದೆಹಲಿ (ಪಿಟಿಐ): ಕೋಲ್ಕತ್ತಾ ಹೈಕೋರ್ಟ್‌ನ ವಿವಾದಿತ ನ್ಯಾಯಮೂರ್ತಿ ಸೌಮಿತ್ರಾ ಸೇನ್ ಅವರ ವಿರುದ್ಧ ಲೋಕಸಭೆಯಲ್ಲಿ ಸೋಮವಾರ ನಡೆಸಲು ನಿಗದಿಯಾಗಿದ್ದ ವಾಗ್ದಂಡನೆ ಗೊತ್ತುವಳಿ ಪ್ರಕ್ರಿಯೆಯನ್ನು ಅವರ ರಾಜಿನಾಮೆ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ.

 

ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ ಬನ್ಸಾಲ್ ಅವರೊಂದಿಗೆ ನಡೆಸಿದ ಸಮಾಲೋಚನೆಯ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ವಾಗ್ದಂಡನೆ ಪ್ರಕ್ರಿಯೆ ಕುರಿತಂತೆ ಲೋಕಸಭಾ ಅಧ್ಯಕ್ಷೆ ಮೀರಾ ಕುಮಾರ್ ಅವರು ಸೋಮವಾರ ಬೆಳಿಗ್ಗೆ ಕೇಂದ್ರ ಸರ್ಕಾರ ಮತ್ತು ಇತರ ರಾಜಕೀಯ ಪಕ್ಷಗಳು ಸಲಹೆ ನೀಡುವಂತೆ ಕೋರಿದ್ದರು.

‘ಸೇನ್ ಅವರ ರಾಜಿನಾಮೆ ಅಂಗೀಕಾರವಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾಗ್ದಂಡನೆ ನಡೆಸುವುದು ವ್ಯರ್ಥ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.ಸದನ ಪ್ರಾರಂಭಕ್ಕೂ ಮೊದಲು ಸಂಸತ್ತಿನ ಹೊರಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಮೀರಾ ಕುಮಾರ್ ಅವರು ‘ಇದು ಹೊಸ ಬೆಳವಣಿಗೆ ಆದ್ದರಿಂದ ಸಬಂಧಿಸಿದವರೊಂದಿಗೆ ಸಮಾಲೊಚಿಸಿದ ನಂತರ ಮಾತನಾಡುತ್ತೇನೆ’ ಎಂದಿದ್ದರು.ಸಾಮಾನ್ಯವಾಗಿ ಸಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿಯ ರಾಜೀನಾಮೆ ಪತ್ರವು ಕ್ರಮಬದ್ಧವಾಗಿದ್ದರೆ  ಅದು ಸ್ವಿಕಾರವಾದಂತೆ. ಅದಕ್ಕೆ ಅಧಿಸೂಚನೆ ಹೊರಡಿಸುವ ಅಗತ್ಯ ಬೀಳುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದರು.ಈ ಕುರಿತು ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅವರು ವಾಗ್ದಂಡನೆ ಪ್ರಕ್ರಿಯೆಯು ರಾಜ್ಯಸಭೆಯಲ್ಲಿ ಪೂರ್ಣಗೊಂಡಿದ್ದು, ಅದು ಲೋಕಸಭೆಯಲ್ಲೂ ಕೂಡ ಜರುಗಬೇಕು ಎಂದು ಹೇಳಿದ್ದರು.

 

ಕಳೆದ ತಿಂಗಳು ರಾಜ್ಯಸಭೆಯು ಸೇನ್ ವಿರುದ್ದ ವಾಗ್ದಂಡನೆ ಗೊತ್ತುವಳಿಯನ್ನು ಭಾರಿ ಬಹುಮತದಿಂದ ಅಂಗೀಕರಿಸಿತ್ತು. ಅದೇ ರೀತಿ ಸೋಮವಾರ ಲೋಕಸಭೆಯಲ್ಲಿ ವಾಗ್ದಂಡನೆ ಗೊತ್ತುವಳಿ ಪ್ರಕ್ರಿಯೆ ನಿಗದಿಯಾಗಿತ್ತು. 

ಈ ಮಧ್ಯ ಸೇನ್ ಅವರು ರಾಪ್ಟ್ರಪತಿ ಅವರಿಗೆ ರಾಜಿನಾಮೆ ಪತ್ರವನ್ನು ಪ್ಯಾಕ್ಸ್ ಮೂಲಕ ರವಾನಿಸಿದ್ದರು. ಆದರೆ ರಾಷ್ಟ್ರಪತಿಗಳು ರಾಜಿನಾಮೆ ಪತ್ರವು ಕ್ರಮಬದ್ದವಾಗಿಲ್ಲ ಎಂದು ತಿರಸ್ಕರಿಸಿದ್ದರು. ನಂತರ ಸೇನ್ ಅವರು ಕ್ರಮಬದ್ದವಾದ ರಾಜಿನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.