ಸೋಮವಾರ, ಏಪ್ರಿಲ್ 19, 2021
32 °C

ಸೇಲ್ ಲಾಭ ರೂ.543 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರದ ಒಡೆತನದ, ಉಕ್ಕು ತಯಾರಿಕಾ ಕ್ಷೇತ್ರದ ಪ್ರಮುಖ ಕಂಪೆನಿ `ಸ್ಟೀಲ್ ಅಥಾರಿಟಿ ಆಫ್ ಇಂಡಿಯ~(ಎಸ್‌ಎಐಎಲ್-ಸೇಲ್), ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ರೂ.543.11 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯ ಲಾಭ ರೂ.485.28 ಕೋಟಿಗೆ ಹೋಲಿಸಿದಲ್ಲಿ ಈ ಬಾರಿ ಶೇ 12ರಷ್ಟು ಪ್ರಗತಿ ಸಾಧಿಸಿದೆ.ಜುಲೈ-ಸೆಪ್ಟೆಂಬರ್‌ನಲ್ಲಿ ಉಕ್ಕು ಮಾರಾಟ ಶೇ 1.60ರಷ್ಟು ತಗ್ಗಿದ್ದರೂ ಧಾರಣೆ ಏರಿಕೆ ಆಗಿದ್ದರ ಪರಿಣಾಮ ಲಾಭ ಗಳಿಕೆಯೂ ಹೆಚ್ಚಿದೆ.2011-12ರಲ್ಲಿ 2ನೇ ತ್ರೈಮಾಸಿಕ ವೇಳೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಹೆಚ್ಚಿದ್ದರ ಪರಿಣಾಮ ರೂ.508.71 ಕೋಟಿ ವರಮಾನ ಕಳೆದುಕೊಂಡಿದ್ದ ಸೇಲ್, ಈ ಬಾರಿ ರೂಪಾಯಿ ಅಪಮೌಲ್ಯದ ಕಾರಣ ವಿನಿಮಯ ವಹಿವಾಟಿನಲ್ಲಿ ರೂ.41.84 ಕೋಟಿಯಷ್ಟು ಹೆಚ್ಚು ವರಮಾನ ಸಂಪಾದಿಸಿದೆ. ಈ ಅಂಶವೂ ಕಂಪೆನಿಯ ಪ್ರಗತಿಗೆ ಅಲ್ಪ ಕೊಡುಗೆ ನೀಡಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.