ಶನಿವಾರ, ಜೂನ್ 12, 2021
28 °C

ಸೇವಂತಿ ಪ್ರಸಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗ ವರ್ತುಲ ತಂಡದಿಂದ ಮಂಗಳವಾರ `ಸೇವಂತಿ ಪ್ರಸಂಗ~ ನಾಟಕ ಪ್ರದರ್ಶನ.

ಜಯಂತ ಕಾಯ್ಕಿಣಿ ರಚನೆಯ ಈ ನಾಟಕವನ್ನು ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶಿಸಿ, ಸಂಗೀತ ನೀಡಿದ್ದಾರೆ.ಹಸಿವು ಬಡತನವನ್ನೇ ಬದುಕಿನ ಆಸ್ತಿಯನ್ನಾಗಿಸಿಕೊಂಡ ಸಮುದಾಯದಲ್ಲಿರುವ ಕಾಡಿನ ಹೂವೊಂದು ಸುಂದರ ಬದುಕಿನ ಕನಸು ಕಂಡಾಗ ಏನಾಗಬಹುದು? ಈ ಪ್ರಶ್ನೆಗೆ ಸರಳ ಹಾಗೂ ಸಮಗ್ರ ಉತ್ತರವೇ ಬರ್ನಾಡ್ ಶಾ ಅವರ `ಪಿಗ್ಮೇಲಿಯನ್~ ಆಧರಿಸಿದ ಜಯಂತ ಕಾಯ್ಕಿಣಿ ಅವರ ಸೇವಂತಿ ಪ್ರಸಂಗ.ಬಲೂನು ಮಾರುವ ಅಂದದ ಹಾಗೂ ಚುರುಕಾದ ಹುಡುಗಿ ಸೇವಂತಿ ಕನಸು ಕಾಣುವಂತೆ ಮಾಡಿ, ಕನಸು ನನಸಾಗುವಲ್ಲಿ ನಡೆಯುವ ನಾಗರಿಕ ಸಮಾಜದ ಪ್ರಯತ್ನಗಳು ಹಾಗೂ ಅದರ ಹಿಂದಿನ ವ್ಯಾಪಾರೀಕರಣ ಮನೋವೃತ್ತಿ ನಾಟಕದ ಉದ್ದಕ್ಕೂ ಅನಾವರಣಗೊಳ್ಳುತ್ತಾ ಹೋಗುತ್ತವೆ.ಅದ್ವಿತಿ, ನಿತೀಶ್, ಪರಮೇಶ್ವರ್, ಪ್ರಜ್ವಲ್ ಗೌಡ, ಮೌನ, ನಿತಿನ್, ವಿಜಯ್, ಸಂಜಯ್ ರಾಘವೇಂದ್ರ, ಅಶ್ವಿನಿ ಜೋಷಿ ಮತ್ತಿತರರು ಪಾತ್ರವರ್ಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತನಗರ. ಸಂಜೆ 7.30 ಟಿಕೆಟ್ ಹಾಗೂ ಮಾಹಿತಿಗೆ: 9986828680

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.