ಸೇವಾದಳದ ಮೂಲಕ ಶಿಸ್ತು ಮೂಡಿಸಿ

7

ಸೇವಾದಳದ ಮೂಲಕ ಶಿಸ್ತು ಮೂಡಿಸಿ

Published:
Updated:

ಮುಂಡಗೋಡ: ಸೇವಾದಳದ ಮೂಲಕ ಮಕ್ಕಳಲ್ಲಿ ಶಿಸ್ತು, ಸಮಯಪಾಲನೆ ಮೂಡಿಸಬೇಕಾದ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ವಿ.ಎಸ್.ಪಾಟೀಲ ಹೇಳಿದರು.

ಭಾರತ ಸೇವಾದಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ  ಇಲ್ಲಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯ ಮಕ್ಕಳ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗಬೇಕಾಗಿದೆ. ಮಕ್ಕಳಲ್ಲಿ ಈಗಿನಿಂದಲೇ ದೇಶಪ್ರೇಮ ಹಾಗೂ ಕರ್ತವ್ಯನಿಷ್ಠೆಯ ಮನೋಭಾವವನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ಪ್ರತಿಫಲ ಪಡೆಯಬಹುದು. ದೇಶದಲ್ಲಿ ಸಾವಿರಾರು ಸಂಘ, ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸಹ ಉತ್ತಮ ಸಮಾಜ ನಿರ್ಮಿಸುವಲ್ಲಿ ಸೇವಾದಳದ ಸೇವೆ ಪ್ರಮುಖವಾಗಿದೆ ಎಂದರು.ತಾಲ್ಲೂಕಿನ ಪಾಳಾ, ಕಾತೂರ, ಮುಂಡಗೋಡ, ಚಿಗಳ್ಳಿ ಹಾಗೂ ಇಂದೂರ ವಲಯಗಳಿಂದ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಮೆಚ್ಚುಗೆ ಗಳಿಸಿದರು.ಪ.ಪಂ. ಅಧ್ಯಕ್ಷ ಮುನಾಫ ಮಿರ್ಜಾನಕರ, ಜಿ.ಪಂ. ಸದಸ್ಯರಾದ ಅಶೋಕ ಶಿರ್ಶಿಕರ, ರತ್ನಕ್ಕ ನಿಂಬಾಯಿ, ಸೇವಾದಳದ ಅಧ್ಯಕ್ಷ  ವಿ.ಎಸ್.ನಾಯ್ಕ, ರಾಮಕೃಷ್ಣ ಮೂಲಿಮನಿ, ಎಚ್.ಎಂ.ನಾಯ್ಕ, ಎಸ್.ಪಿ. ಸಮ್ಮಸಗಿ, ಉಮೇಶ ವಿಜಾಪುರ, ಸುಭಾಸ ಡೋರಿ, ಎಸ್.ಬಿ.ಹೂಗಾರ, ಎಂ.ಪಿ.ಕುಸೂರ, ಸಿ.ಕೆ.ಅಶೋಕ ಇತರರು ಉಪಸ್ಥಿತರಿದ್ದರು.

ಜಿ.ಎಸ್.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಇ.ಓ ವೈ.ಬಿ. ಬಾದವಾಡಗಿ ಸ್ವಾಗತಿಸಿದರು. ಬಾಲಚಂದ್ರ ಹೆಗಡೆ ಹಾಗೂ ನಾಗರಾಜ ನಾಯ್ಕ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry