ಸೇವಾಲಾಲರ ವೃತ್ತ ಧ್ವಂಸ: ಸೂಕ್ತ ಕ್ರಮಕ್ಕೆ ಆಗ್ರಹ

7

ಸೇವಾಲಾಲರ ವೃತ್ತ ಧ್ವಂಸ: ಸೂಕ್ತ ಕ್ರಮಕ್ಕೆ ಆಗ್ರಹ

Published:
Updated:
ಸೇವಾಲಾಲರ ವೃತ್ತ ಧ್ವಂಸ: ಸೂಕ್ತ ಕ್ರಮಕ್ಕೆ ಆಗ್ರಹ

ಬ್ಯಾಡಗಿ: ವಿಜಾಪುರ ಜಿಲ್ಲೆ ಇಂಡಿ ಪಟ್ಟಣ ದಲ್ಲಿ ಲಂಬಾಣಿ ಧರ್ಮಗುರು ಸೇವಾಲಾಲರ ವೃತ್ತವನ್ನು ದ್ವಂಸ ಗೊಳಿಸಿರುವುದನ್ನು ಖಂಡಿಸಿ ಬ್ಯಾಡಗಿ ಯಲ್ಲಿ ಬಂಜಾರ ಸಂಘದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ತಪ್ಪಿತ ಸ್ತರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಒತ್ತಾಯಿಸಲಾಯಿತು.ಪಟ್ಟಣದ ಹಳೆ ಪುರಸಭೆಯಿಂದ ಆರಂಭವಾದ ಮೆರವಣೆಗೆ ಮುಖ್ಯ ರಸ್ತೆಯ ಮೂಲಕ ಹಾಯ್ದು ತಹಶೀ ಲ್ದಾರ ಕಾರ್ಯಾಲಯ ತಲುಪಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿ.ಪಂ. ಮಾಜಿ ಉಪಾಧ್ಯಕ್ಷೆ ಕಮಲಾ ನಾಯಕ್ ಮಾತನಾಡಿ ವಿಜಾಪುರ ಜಿಲ್ಲೆ ಇಂಡಿಯಲ್ಲಿ ನಿರ್ಮಿಸಿದ್ದ ಬಂಜಾರರ ಧರ್ಮ ಗುರು ಸೇವಾಲಾರ ವೃತ್ತವನ್ನು ಒಡೆದು ಹಾಕಿರುವುದು ಇಡೀ ಬಂಜಾರ ಸಮಾಜವನ್ನು ಅವಮಾನಗೊಳಿಸಿ ದಂತಾಗಿದೆ ಎಂದು ಟೀಕಿಸಿದ್ದಾರೆ.ಇಂತಹ ದುಷ್ಕೃತ್ಯವೆಸಗಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಮುಖಂಡ ಹನುಮಂತಪ್ಪ ಲಮಾಣಿ, ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ ಮಾತನಾಡಿ ವೃತ್ತವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವುದು ಸಮಾಜದಲ್ಲಿ ಶಾಂತ ಪರಿಸ್ಥಿತಿಯನ್ನು ಕದಡುವ ಪ್ರಯತ್ನವಾಗಿದೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು. ನಿವೃತ್ತ ಜಿಲ್ಲಾ ನೋಂದಣಾಧಿಕಾರಿ ಲಕ್ಷ್ಮಣ ನಾಯಕ, ಕಲ್ಲಪ್ಪ ಲಮಾಣಿ, ಗದಿಗೇಶ ಲಮಾಣಿ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry