ಭಾನುವಾರ, ಮೇ 9, 2021
19 °C

ಸೇವಾ ಕ್ಷೇತ್ರದಲ್ಲಿ ಕನ್ನಡದ ಉಪೇಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ನಾಗರಿಕರು ವಿವಿಧ ಇಲಾಖೆಗಳಿಗೆ ಮಾಡುವ ಪಾವತಿಗಳು ಹಾಗೂ ಇತರ ಸೇವೆಗಳು ಒಂದೇ ಸೂರಿನಡಿ ಸಿಗಬೇಕು ಎಂಬ ಉದ್ದೆೀಶದಿಂದ ಸ್ಥಾಪಿತವಾದ ಸಂಸ್ಥೆ ಬೆಂಗಳೂರು ಒನ್. ಅದು ಏಳು ವರ್ಷ ಪೂರೈಸಿ ಎಂಟನೇ ವರ್ಷಕ್ಕೆ ಕಾಲಿಟ್ಟಿದೆ.

ಬೆಂಗಳೂರಿನ ಲಕ್ಷಾಂತರ ಜನರು `ಬೆಂಗಳೂರು ಒನ್ ಸೇವೆ~ ಪಡೆಯುತ್ತಿದ್ದಾರೆ.ಆದರೆ ಈ ಸಂಸ್ಥೆಯು ಕನ್ನಡವನ್ನು ಕಡೆಗಣಿಸಿದೆ. ಹಣ ಪಾವತಿ ರಶೀದಿಗಳು ಸಂಪೂರ್ಣ ಇಂಗ್ಲಿಷ್‌ನಲ್ಲಿವೆ. ಬೆಂಗಳೂರು ಒನ್ ಸೇವೆಗಳ ಮಾಹಿತಿ ನೀಡುವ ವೆಬ್ ತಾಣದಲ್ಲಿಯೂ ಕನ್ನಡವನ್ನು ಕಡೆಗಣಿಸಲಾಗಿದೆ.ಇಂಗ್ಲಿಷ್ ಬಾರದ ಜನ ಸಾಮಾನ್ಯರು ಪಾವತಿ ರಶೀದಿಯಲ್ಲಿನ ವಿವರಗಳನ್ನು ತಿಳಿದುಕೊಳ್ಳಲು ಇತರರನ್ನು ಆಶ್ರಯಿಸುವಂತೆ ಆಗಿದೆ.ರಾಜ್ಯದ ಆಡಳಿತ ಭಾಷೆ ಕನ್ನಡ. ಅದು ಪರಿಸರದ ಭಾಷೆಯೂ ಹೌದು. ಆದರೆ ಕರ್ನಾಟಕದಲ್ಲೇ ಸಾಮಾನ್ಯ ಸೇವಾ ವ್ಯವಸ್ಥೆ ವಲಯದಲ್ಲಿ ಕನ್ನಡ ಬಳಕೆ ಆಗುತ್ತಿಲ್ಲ. ಇದು ನಿಜಕ್ಕೂ ಶೋಚನೀಯ.ಸರ್ಕಾರ ಗಣಕ ಪರಿಷತ್ ಹಾಗೂ ಕಂಪ್ಯೂಟರ್‌ನಲ್ಲಿ ಕನ್ನಡ ಬಳಸುವ ತಜ್ಞರ ನೆರವು ಪಡೆದು ಸಾಮಾನ್ಯ ಸೇವಾ ವಲಯದಲ್ಲಿ ಕನ್ನಡ ಜಾರಿಗೆ ತರಬೇಕು. ಸಾಹಿತ್ಯ ಪರಿಷತ್ತು ಮತ್ತಿತರ ಕನ್ನಡ ಪರ ಸಂಘಟನೆಗಳು ಇತ್ತ ಕಡೆ ಗಮನ ಹರಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.