ಬುಧವಾರ, ಮೇ 25, 2022
22 °C

ಸೇವಾ ತೆರಿಗೆ: ಸಿಬಿಇಸಿ ನಿಲುವು ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮಹಾಲೇಖಪಾಲರ (ಸಿಎಜಿ) ಮೇಲೆ ಸೇವಾ ತೆರಿಗೆ ವಿಧಿಸುವ ತನ್ನ ಮೊದಲಿನ ನಿಲುವನ್ನು ಬದಲಿಸಿದ ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆ, ಸಿಎಜಿ ಅವರು ವ್ಯವಹಾರ ಬೆಂಬಲಿತ ಸೇವಾ ವ್ಯಾಪ್ತಿಗೆ ಒಳಪಡದಿರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.ತೆರಿಗೆ ಸಂಶೋಧನಾ ಘಟಕ ಇದೇ 19ರಂದು ಹೊರಡಿಸಿದ ಸುತ್ತೋಲೆ ಈ ವಿಷಯ ಸ್ಪಷ್ಟಪಡಿಸಿದೆ. ದೇಶಾದ್ಯಂತದ ಮಹಾಲೇಖಪಾಲ ಸಂಸ್ಥೆ ರೂ 33 ಲಕ್ಷಗಳಷ್ಟು ಸೇವಾ ತೆರಿಗೆ ಪಾವತಿಸಲು ಬಾಕಿ ಇದೆ ಎಂದು ಮುಖ್ಯ ಸೇವಾ ತೆರಿಗೆ ಆಯುಕ್ತರು ಕೇಂದ್ರ ಅಬಕಾರಿ ಮತ್ತು ಸುಂಕ ಆಯುಕ್ತರಿಗೆ ಪತ್ರ ಬರೆದ 22 ದಿನಗಳ ಬಳಿಕ ಈ ಸುತ್ತೋಲೆ ಪ್ರಕಟಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.