ಸೇವಾ ನಿಯಮ ಉಲ್ಲಂಘನೆ ಮಾಡಿಲ್ಲ: ಅರವಿಂದ ಕೇಜ್ರಿವಾಲ್

ಭಾನುವಾರ, ಮೇ 26, 2019
26 °C

ಸೇವಾ ನಿಯಮ ಉಲ್ಲಂಘನೆ ಮಾಡಿಲ್ಲ: ಅರವಿಂದ ಕೇಜ್ರಿವಾಲ್

Published:
Updated:

ನವದೆಹಲಿ (ಐಎಎನ್ಎಸ್):  ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರು 2006ರವರೆಗೆ ಸರ್ಕಾರಿ ಸೇವೆಯಲ್ಲಿರುವಾಗ ಆದಾಯ ತೆರಿಗೆ ಇಲಾಖೆಗೆ ಪಾವತಿಸಬೇಕಾಗಿದ್ದ ರೂ. 9ಲಕ್ಷವನ್ನು ಪಾವತಿಸುವಂತೆ ಇಲಾಖೆಯು ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಆದರೆ ಇದನ್ನು ಕೇಜ್ರಿವಾಲ್ ಅವರು ಶುಕ್ರವಾರ ತಿರಸ್ಕರಿಸಿದ್ದಾರೆ.

~ನಾನು ಯಾವುದೇ ಸೇವಾ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ಈ ಆರೋಪವು ತಳಹದಿ ಇಲ್ಲದ್ದು~ ಎಂದು ಅವರು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

2006 ರಲ್ಲಿ ನಾನು ರಾಜಿನಾಮೆ ನೀಡುವ ಅವಧಿಯವರೆಗೂ ಯಾವುದೇ ಸೇವಾ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ನನ್ನ ಜಿಪಿಎಫ್ ನಲ್ಲಿ ಸಂಬಂಧಪಟ್ಟ ಹಣವನ್ನು ಕಡಿತ ಮಾಡಿಕೊಳ್ಳುವಂತೆ ನಾನು ಸರ್ಕಾರಕ್ಕೆ ಪತ್ರವನ್ನು ಬರೆದಿರುತ್ತೇನೆ~ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ಆದರೂ, ಸರ್ಕಾರ ಇದುವರೆಗೂ ಸಂಬಂಧಿಸಿದ ಹಣವನ್ನು ಕಡಿತ ಮಾಡಿಕೊಂಡಿಲ್ಲ. ನಾಲ್ಕು ವರ್ಷಗಳ ನಂತರ ಇಲಾಖೆ ನೋಟಿಸ್ ಜಾರಿಮಾಡಿದೆ. ಅದು ಗಾಂಧಿವಾದಿ ಅಣ್ಣಾ ಹಜಾರೆ ಅವರು ಪ್ರಬಲ ಲೋಕಪಾಲ್ ಮಸೂದೆ ಮಂಡನೆಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸುವ ಮುಂಚೆ ನೋಟಿಸ್ ಜಾರಿಗೊಳಿದೆ~ ಎಂದಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry