ಸೇವಾ ಭದ್ರತೆ– ವೇತನ ಹೆಚ್ಚಳಕ್ಕೆ ಒತ್ತಾಯ

7

ಸೇವಾ ಭದ್ರತೆ– ವೇತನ ಹೆಚ್ಚಳಕ್ಕೆ ಒತ್ತಾಯ

Published:
Updated:

ರಾಯಚೂರು: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಾಯಂಗೊಳಿಸಬೇಕು, ಯು.ಜಿ.ಸಿ ನಿಯಮಾಳಿಯಂತೆ ತಿಂಗಳಿಗೆ 25 ಸಾವಿರ ವೇತನ ನಿಗದಿಗೊಳಿಸಬೇಕು ಸೇರಿದಂತೆ ಹಲವು  ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೆಪ್ಟೆಂಬರ್‌ 25ರಂದು ಪ್ರತಿಭಟನಾ ರಾ್ಯಲಿ ಹಮ್ಮಿಕೊಳ್ಳಲಾಗಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಶರಣಬಸವ ಪಾಟೀಲ್‌ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿ, ಅತಿಥಿ ಉಪನ್ಯಾಸಕರ ಸಂಘದ ರಾಜ್ ಘಟಕವು ಈ ಪ್ರತಿಭ­ಟನಾ ರಾ್ಯಲಿಯನ್ನು ರಾಜ್ಯ ಮಟ್ಟದಲ್ಲಿ ಆಯೋ­ಜಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಡಾ.ಬಿ.ಆರ್‌ ಅಂಬೇಡ್ಕರ್‌ ವೃತ್ತ­ದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರಾ್ಯಲಿ ನಡೆಸಲಾಗುವುದು.  ಜಿಲ್ಲೆಯಲ್ಲಿನ 230 ಅತಿಥಿ ಉಪನ್ಯಾ­ಸಕರು, ಸಂಘದ ಪ್ರತಿನಿಧಿಗಳು ಪಾಲ್ಗೊ­ಳ್ಳ­ಲಿದ್ದು ತರಗತಿಯಿಂದ ದೂರ ಉಳಿದು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳು­ತ್ತಿದ್ದಾರೆ ಎಂದರು.ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ ನೀಡಿ ಕನಿಷ್ಠ 3–4 ತಿಂಗಳು ವೇತನ ಕೊಡಬೇಕು, ಉಪನ್ಯಾಸಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಬೇಕು, ಕನಿಷ್ಠ 5 ವರ್ಷ ಸೇವಾನುಭವ ಆಧರಿಸಿ ವರ್ಷಕ್ಕೆ 5ರಂತೆ ಕೃಪಾಂಕ ನೀಡಬೇಕು, ವಯೋಮಿತಿ ಮೀರಿರುವ, ಮೀರುತ್ತಿ­ರುವ ಅತಿಥಿ ಉಪನ್ಯಾಸಕರಿಗೆ ಉಪನ್ಯಾ­ಸಕರ ನೇಮಕಾತಿಯಲ್ಲಿ ಆದ್ಯತೆ ನೀಡ­ಬೇಕು, ಖಾಲಿ ಇರುವ  6 ಸಾವಿರ ಉಪನ್ಯಾಸಕ, 3 ಸಾವಿರ ಬೋಧಕೇತರ ಹುದ್ದೆಗಳು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಬೇಡಿಕೆಗಳಾ­ಗಿವೆ ಎಂದು ಹೇಳಿದರು.ಎಲ್ಲ ಹಂತದ ಕಾಲೇಜಿ ಶಿಕ್ಷಣ ಇಲಾಖೆಗಳು ಮತ್ತು ಎಲ್ಲ ಸರ್ಕಾರಿ ಕಾಲೇಜುಗಳಿಗೆ ಅಗತ್ಯ ಅತ್ಯಾಧುನಿಕ ಮೂಲ ಶೈಕ್ಷಣಿಕ ಸೌಲಭ್ಯ ಕೊಡಬೇಕು, ಮುಂದಿನ ಉಪನ್ಯಾಸಕರ ನೇಮಕಾತಿ­ಯಲ್ಲಿ ಎಂ.ಫಿಲ್‌ ಕೋರ್ಸ್ ಪರಿಗಣಿ­ಸಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದ ವಿವರಿಸಿದರು.ರಾಜ್ಯದ 362 ಸರ್ಕಾರಿ ಕಾಲೇಜು­ಗಳಲ್ಲಿ 10,600ಕ್ಕಿಂತ ಹೆಚ್ಚಿನ ಸಂಖ್ಯೆ­ಯಲ್ಲಿ ಅತಿಥಿ ಉಪನ್ಯಾಸಕರು  ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶ್ರಮಿ­ಸುತ್ತಿದ್ದಾರೆ. ಅತ್ಯಂಕ ಕಡಿಮೆ ವೇತನ ನೀಡಿ ಉನ್ನತ ಶಿಕ್ಷಣ ಪಡೆದ ಉಪ­ನ್ಯಾಸಕರನ್ನು ಹೀನಾಯ ಮಟ್ಟದಲ್ಲಿ ಸರ್ಕಾರ ನಡೆಸಿಕೊಂಡು ಬಂದಿದೆ. ಅಲ್ಲದೇ ವರ್ಷಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಮಾರ್ಪಾಡು ಮಾಡುತ್ತಿರುವುದು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಹೇಳಿದರು.ಈ ಸಮಸ್ಯೆ ಹೋಗಲಾಡಿಸಲು ಅನೇಕ ಬಾರಿ ಪ್ರತಿಭಟನೆ, ಸಮಾವೇಶ ನಡೆಸಲಾಗಿದೆ. ಹಿಂದಿನ ಸರ್ಕಾರಕ್ಕೆ ಸೂಕ್ತ ರೀತಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರೂ ಸ್ಪಂದಿಸಲಿಲ್ಲ. ಬದಲಾಗಿ ಮತ್ತಷ್ಟ ಕೆಟ್ಟದಾಗಿ ನಡೆಸಿಕೊಳ್ಳುವ ಮಟ್ಟಕ್ಕೆ ಇಳಿಯಿತು.  ಈಗ ಹೊಸ ಸರ್ಕಾರ ಬಂದಿದ್ದು, ಈ ಸರ್ಕಾರ ತಮ್ಮ ಬೇಡಿಕೆ ಗಮನಹರಿಸಿ ಈಡೇರಿಸಬೇಕು. ಇಲ್ಲದೇ ಇದ್ದರೆ ತರಗತಿ ಬಹಿಷ್ಕರಿಸಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಕಾನೂನು ಹೋರಾಟಕ್ಕೂ ಸಂಘಟನೆ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.ಸಂಘದ ಜಿಲ್ಲಾ ಘಟಕ ಕಾರ್ಯದರ್ಶಿ ವಿರೇಶ ಜಕ್ಕಲದಿನ್ನಿ, ಸಹ ಕಾರ್ಯದರ್ಶಿ ಹನುಮಂತ ನಿಲುವಂಜಿ, ಡಾ.ಪುಷ್ಪಾ­ವತಿ, ಸುರೇಖಾ, ದೇವರಾಜ, ರಾಜು, ಈರಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry