ಗುರುವಾರ , ಫೆಬ್ರವರಿ 25, 2021
17 °C
ಭಾರತ ಸೇವಾದಳ ಶಿಕ್ಷಕರ ಜಿಲ್ಲಾಮಟ್ಟದ ‘ಶಿಕ್ಷಕ್ ಮಿಲಾಪ್ ಶಿಬಿರ’ಕ್ಕೆ ಚಾಲನೆ

ಸೇವಾ ಮನೋಭಾವ ಇದ್ದರೆ ದೇಶದ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇವಾ ಮನೋಭಾವ ಇದ್ದರೆ ದೇಶದ ಪ್ರಗತಿ

ಮಡಿಕೇರಿ: ಸೇವಾ ಮನೋಭಾವ ಇದ್ದಲ್ಲಿ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ. ಆ ನಿಟ್ಟಿನಲ್ಲಿ ಭಾರತ ಸೇವಾದಳ ಬಲಪಡಿಸಲು ಕೈಜೋಡಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.ಭಾರತ ಸೇವಾದಳ ವತಿಯಿಂದ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಭಾರತ ಸೇವಾದಳ ಶಿಕ್ಷಕರ ಜಿಲ್ಲಾಮಟ್ಟದ ‘ಶಿಕ್ಷಕ್ ಮಿಲಾಪ್ ಶಿಬಿರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ದೇಶದ ಸ್ವಾತಂತ್ರ್ಯ ಪಡೆಯಲು ಹರ್ಡಿಕರ್ ಅವರ ನೇತೃತ್ವದಲ್ಲಿ ಸೇವಾದಳವನ್ನು ಆರಂಭಿಸಲಾಯಿತು. ಇದರಲ್ಲಿ ಶಿಕ್ಷಕರು, ಸಂಘ– ಸಂಸ್ಥೆಗಳ ಪ್ರತಿನಿಧಿಗಳು ತೊಡಗಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.ಸೇವಾದಳದ ಧ್ಯೇಯ ವಾಕ್ಯವಾದ ‘ಸೇವೆಗಾಗಿ ಬಾಳು’ ಎಂಬುದಾಗಿದೆ. ಆದರೆ, ಈಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಬದುಕಿಗಾಗಿ ಸೇವೆ ಎಂಬಂತಾಗಿದೆ. ಇದನ್ನು ಹೋಗಲಾಡಿಸಿ, ಎಲ್ಲರಲ್ಲಿಯೂ ಸೇವಾ ಮನೋಭಾವ ಬರಬೇಕು ಎಂದು ಸಲಹೆ ಮಾಡಿದರು.   ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಭಾರತ್ ಸೇವಾದಳದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ₹ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗು ವುದು ಎಂದು ಭರವಸೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು ಮಾತನಾಡಿದರು.ಇದೇ ಸಂದರ್ಭದಲ್ಲಿ ನೂತನವಾಗಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ ಯಾದ ಎಂ.ಪಿ. ಸುನಿಲ್‌ ಸುಬ್ರಮಣಿ ಅವರನ್ನು ಭಾರತ ಸೇವಾದಳದ ವತಯಿಂದ ಸನ್ಮಾನಿಸಲಾಯಿತು. ಭಾರತ ಸೇವಾ ದಳದ ಕೇಂದ್ರ ಸಮಿತಿ ಸದಸ್ಯ ಎ.ಕೆ. ಪಾಲಾಕ್ಷ, ಮಡಿಕೇರಿ ತಾಲ್ಲೂಕು ಸಮಿತಿ ಅಧ್ಯಕ್ಷ ಕೋಡಿ ಚಂದ್ರಶೇಖರ್, ಸೋಮವಾರ ಪೇಟೆ ತಾಲ್ಲೂಕು ಅಧ್ಯಕ್ಷ ಜಗದೀಶ, ರೇವತಿ ರಮೇಶ್, ಜಿಲ್ಲಾ ಸಂಚಾಲಕ ಚಂದ್ರಕಾಂತ್ ಉಪಸ್ಥಿತರಿದ್ದರು. ಭಾರತ ಸೇವಾದಳದ ಖಜಾಂಜಿ ನಾಪಂಡ ರವಿಕಾಳಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಮೋಂತಿ ಗಣೇಶ್ ವಂದಿಸಿದರು.

*

ಅಹಿಂಸಾತ್ಮಕವಾಗಿ ಸ್ವಾತಂತ್ರ್ಯ ಪಡೆಯಬೇಕು ಎಂಬ ಉದ್ದೇಶದಿಂದ ಸೇವಾದಳ ಆರಂಭವಾಯಿತು. ದೇಶ ಸೇವೆಗಾಗಿ ಹಲವರು ಸೇವೆ ಸಲ್ಲಿಸಿದ್ದಾರೆ.

–ಜಿ.ಆರ್. ಬಸವರಾಜು,

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.