ಬುಧವಾರ, ಅಕ್ಟೋಬರ್ 16, 2019
27 °C

ಸೇವಾ ಶುಲ್ಕ ವಿವರ: ಟ್ರಾಯ್ ಸೂಚನೆ

Published:
Updated:

ನವದೆಹಲಿ (ಪಿಟಿಐ): ಪೂರ್ವ ಪಾವತಿ (ಪ್ರೀ ಪೇಯ್ಡ) ಮೊಬೈಲ್ ಗ್ರಾಹಕರು, ತಾವು ಬಳಸಿದ ಕರೆ ದರ ಮತ್ತು ಇತರ ಸೇವೆಗಳ ಬಳಕೆಗೆ  ಸಂಬಂಧಿಸಿದಂತೆ ಸೇವಾ ಶುಲ್ಕ ಕಡಿತದ ಬಗ್ಗೆ ವಿವರವಾದ  ದರ ಪಟ್ಟಿಯನ್ನು  ಸಂಬಂಧಿಸಿದ ಸೇವಾ ಸಂಸ್ಥೆಗಳಿಂದ ಪಡೆಯಬಹುದು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ. 

 ಆದರೆ, ಈ ಸೇವೆಗೆ ದೂರವಾಣಿ ಸಂಸ್ಥೆಗಳು ವಿಧಿಸುವ ಶುಲ್ಕ ರೂ. 50 ಮೀರಬಾರದು ಎಂದೂ ತಿಳಿಸಿದೆ. ಗ್ರಾಹಕರು ತಾವು ಮಾಡಿದ ಪ್ರತಿ ಕರೆ, ಎಸ್‌ಎಂಎಸ್‌ಗಳಿಗೆ ಕಡಿತಗೊಂಡಿರುವ ಶುಲ್ಕದ ವಿವರಗಳನ್ನು ಈ ಸೇವೆಯಡಿ ಪಡೆಯಬಹುದಾಗಿದೆ.

ಮನವಿ ಸಲ್ಲಿಸಿದ 30 ದಿನಗಳ ಒಳಗೆ ಮಾಹಿತಿ ನೀಡುವಂತೆ ಸೇವಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಪೂರ್ವ ಪಾವತಿ ಸೇವೆ ಬಳಸುತ್ತಿರುವ ಮೊಬೈಲ್ ಗ್ರಾಹಕರ ಹಿತಾಸಕ್ತಿ ರಕ್ಷಿಸಲು `ಟ್ರಾಯ್~  ಈ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಗ್ರಾಹಕರು ತಾವು ಸದ್ಯ ಬಳಸುತ್ತಿರುವ ಸೇವಾ ಯೋಜನೆ, ಕರೆ ದರ, ಖಾತೆಯಲ್ಲಿ ಉಳಿದಿರುವ ಮೊತ್ತ,  ಮೌಲ್ಯವರ್ಧಿತ ಸೇವೆಗಳ ಬಗ್ಗೆ ಉಚಿತವಾಗಿ ಮಾಹಿತಿ ಪಡೆಯಬಹುದು ಎಂದು ಹೇಳಿದೆ.

ಅನಪೇಕ್ಷಿತ ಕರೆ ನಿಷೇಧವನ್ನು `ಟ್ರಾಯ್ ಈಗಾಗಲೇ ಜಾರಿಗೊಳಿಸಿದೆ.

Post Comments (+)