ಸೇವೆಯೇ ಯುವಕರ ಧ್ಯೇಯವಾಗಲಿ

7

ಸೇವೆಯೇ ಯುವಕರ ಧ್ಯೇಯವಾಗಲಿ

Published:
Updated:
ಸೇವೆಯೇ ಯುವಕರ ಧ್ಯೇಯವಾಗಲಿ

ರಾಣೆಬೆನ್ನೂರು: ಗ್ರಾಮದ ಸ್ವಚ್ಛತೆಯೇ ಗ್ರಾಮದ ಸ್ವಸ್ಥತೆ. ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಯುವಕರ ಪಾತ್ರ ಅತ್ಯಮೂಲ್ಯವಾಗಿದೆ. ದೇಶದ ಪ್ರತಿ  ಹಳ್ಳಿಗಳಲ್ಲಿ ಯುವಕರು ಯಾವುದೇ ಕೆಲಸಕ್ಕೆ  ಟೊಂಕಕಟ್ಟಿ ನಿಂತಲ್ಲಿ ಕ್ಷಣಾರ್ಧದಲ್ಲಿ ಆ ಕೆಲಸ ಪೂರ್ಣಗೊಳಿಸಬಹುದಾಗಿದೆ ಎಂದು  ಪೊಲೀಸ್ ಉಪಾಧೀಕ್ಷಕರಾದ ಜಯಪ್ರಕಾಶ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಶ್ರೀನಿವಾಸಪುರ(ಗಂಗಾಜಲ ತಾಂಡ) ಗ್ರಾಮದಲ್ಲಿ  ಯುವಶಕ್ತಿಯೇ ದೇಶದ ಶಕ್ತಿ  ಶೀರ್ಷಿಕೆಯಡಿ ಹಮ್ಮಿಕೊಂಡ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ನಿಸ್ವಾರ್ಥ ಸೇವೆಯ ಧ್ಯೇಯ ಇಟ್ಟುಕೊಂಡು ಮಾಡಲಾಗುವ ಎನ್‌ಎಸ್‌ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು ಎಂದು ಅವರು ಕರೆ ನೀಡಿದರು. 

ರಾಹುತನಕಟ್ಟೆ ಗ್ರಾ.ಪಂ ಸದಸ್ಯರಾದ ಮಾರುತಿ ರಾಠೋಡ ಅವರು ಮಾತನಾಡಿ ವಿದ್ಯಾರ್ಥಿಗಳ ಶಿಸ್ತು ಮತ್ತು ಸೇವೆಯನ್ನು ಗ್ರಾಮಸ್ಥರು ಮೈಗೂಡಿಸಿ ಕೊಂಡಲ್ಲಿ ಎಂದೆಂದಿಗೂ ಗ್ರಾಮವು ನಿರ್ಮಲವಾ ಗಿರಲು ಸಾಧ್ಯ ಎಂದರು.ಜಿಲ್ಲಾ ಯುವ ಒಕ್ಕೂಟದ ಅದ್ಯಕ್ಷರಾದ ಅಶೋಕ ಚವ್ಹಾಣ, ಕಾಲೇಜು ಅಭಿವದ್ಧಿ ಸಮಿತಿ ಸದಸ್ಯ ರಮೇಶ ಡಿ.ನಾಯಕ, ಗಾ.ಪಂ. ಸದಸ್ಯರಾದ ಶಿವಾಜಪ್ಪ ಹಣಮಂತಪ್ಪ ಬಣಕಾರ, ಸಹ ಪ್ರಾಧ್ಯಾ ಪಕರುಗಳಾದ ಡಾ ಅಶೋಕ ಕುರ್ಲಿ, ಪ್ರೊ. ಆರ್. ಎಫ್. ಅಯ್ಯನಗೌಡ್ರ, ಗೀತಾ ವಾಲೀಕಾರ ಮಾತನಾ ಡಿದರು. ಸಮಾರಂಭದ ಅದ್ಯಕ್ಷ ೆವಹಿಸಿಕೊಂಡ ಪ್ರಾಂಶುಪಾಲ  ಪ್ರೊ. ಬಿ.ಆರ್. ಪಾಟೀಲ ಮಾತನಾಡಿ ಗಾಂಧಿಜೀಯವರ ಗ್ರಾಮರಾಜ್ಯದ ಕನಸನ್ನು, ನಿಸ್ವಾರ್ಥ ಸೇವೆಯ ತತ್ವಾದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು.

 

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಬಿ.ರವಿ, ಸಹ ಶಿಬಿರಾಧಿಕಾರಿ ಚಂದ್ರಶೇಖರ ಎಸ್. ಉಪಸ್ಥಿತರಿದ್ದರು.ಎನ್‌ಎಸ್‌ಎಸ್ ಶಿಬಿರಾರ್ಥಿಗಳು, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿಗಳು, ಗ್ರಾಮದ ಗಣ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಕು. ಗೌರಮ್ಮ ಪ್ರಾಥಿಸಿದರು, ಅರುಣಕುಮಾರ ಚಂದನ್ ಕಾರ್ಯಕ್ರಮವನ್ನು  ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry