ಗುರುವಾರ , ಆಗಸ್ಟ್ 6, 2020
27 °C

ಸೇವೆ ಕಾಯಂಗೆ ನೌಕರರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇವೆ ಕಾಯಂಗೆ ನೌಕರರ ಆಗ್ರಹ

ಮುಂಡರಗಿ: ಪುರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಕಾಯಂ ಮಾಡುವುದು ಹಾಗೂ ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸ್ಥಳೀಯ ಪುರಸಭೆ ದಿನಗೂಲಿ ನೌಕರರು ಶನಿವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಬೆಳಿಗ್ಗೆ 11ಗಂಟೆಗೆ ಪುರಸಭೆ ಆವರಣದಿಂದ ಹೊರಟ ದಿನಗೂಲಿ ನೌಕರರು ಬೃಂದಾವನ ಸರ್ಕಲ್, ಕಾಲೇಜು ರಸ್ತೆ, ಭಜಂತ್ರಿ ಓಣಿ, ಕೊಪ್ಪಳ ಕ್ರಾಸ್ ಮಾರ್ಗವಾಗಿ ತಹಸೀಲ್ದಾರ ಕಚೇರಿಗೆ ಆಗಮಿಸಿದರು.ಈ ಸಂದರ್ಭದಲ್ಲಿ ದಿನಗೂಲಿ ನೌಕರರನ್ನು ಉದ್ದೇಶಿಸಿ ಮಾತನಾಡಿದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ, `ಪುರಸಭೆಯ ದಿನಗೂಲಿ ನೌಕರರು ಕಳೆದ ಎಂಟು ತಿಂಗಳಿಂದಲೂ ವೇತನವಿಲ್ಲದೆ ಪರದಾಡುವಂತಾಗಿದ್ದು, ಅವರ ವೇತನ ಬಿಡುಗಡೆ ಸೇರಿದಂತೆ ತಕ್ಷಣ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು' ಎಂದು ಒತ್ತಾಯಿಸಿದರು.ಬೇರೆ ಕೆಲಸಗಾರರನ್ನು ತಗೆದುಕೊಳ್ಳುವ ಬದಲಾಗಿ ಈಗ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನೆ ಮುಂದುವರಿಸಬೇಕು ಮತ್ತು ಪುರಸಭೆಯ ದಿನಗೂಲಿ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಸೋಮವಾರದಿಂದ ಪುರಸಭೆ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.ಪುರಸಭೆ ಸದಸ್ಯರಾದ ಬಸವರಾಜ ರಾಮೇನಹಳ್ಳಿ, ಪರಶುರಾಮ ಕರಡಿಕೊಳ್ಳ, ಮುಖಂಡರಾದ ನಬಿಸಾಬ್ ಕೆಲೂರ, ವಿರೂಪಾಕ್ಷಿ ಗಂಜಿಗಟ್ಟಿ, ದಿನಗೂಲಿ ನೌಕರರಾದ ಮಾರುತಿ ದೊಡ್ಡಮನಿ, ಈರಣ್ಣ ದೇಸಾಯಿ, ಪಿ.ಎನ್.ಡಂಬಳ, ಚನಬಸಪ್ಪ, ಹನುಮಂತಪ್ಪ ಹರಿಜನ, ಪ್ರವೀಣ ಗೌಡ್ರ, ನಾಗಮ್ಮ ಹಾಲಿನವರ, ನೀಲವ್ವ ಮಾಯಮ್ಮನವರ, ಸರೋಜಾ ದೊಡ್ಡಮನಿ, ಸಾರೆವ್ವ ದೊಡ್ಡಮನಿ, ಕಮಲವ್ವ ಪೂಜಾರ, ಗಂಗವ್ವ ಹಾಲಿನವರ, ಪ್ರೇಮವ್ವ ಹಾಲಿನವರ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.