ಸೋಮವಾರ, ನವೆಂಬರ್ 18, 2019
20 °C

ಸೇವೆ ವಿಸ್ತರಣೆ

Published:
Updated:

ನವದೆಹಲಿ: ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರ ಸೇವೆಯನ್ನು ಎರಡು ತಿಂಗಳ ಕಾಲ ವಿಸ್ತರಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.ಈ ತಿಂಗಳು ಕೊನೆಗೆ ರಂಗನಾಥ್ ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಆದರೆ, ಚುನಾವಣಾ ಆಯೋಗದ ಸೂಚನೆ ಮೇಲೆ ಮುಖ್ಯ ಕಾರ್ಯದರ್ಶಿ ಸೇವೆಯನ್ನು ಮೂರು ತಿಂಗಳು ವಿಸ್ತರಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.ರಾಜ್ಯದ ಶಿಫಾರಸು ಪರಿಶೀಲಿಸಿದ ಕೇಂದ್ರ ಸರ್ಕಾರ ಮುಖ್ಯ ಕಾರ್ಯದರ್ಶಿ ಸೇವೆಯನ್ನು ಕೇವಲ 2 ತಿಂಗಳು ಮಾತ್ರ ವಿಸ್ತರಿಸಿ ಆದೇಶ ಹೊರಡಿಸಿತು ಎಂದು ಉನ್ನತ ಮೂಲಗಳುವ`ಪ್ರಜಾವಾಣಿ'ಗೆ ತಿಳಿಸಿವೆ.

ಪ್ರತಿಕ್ರಿಯಿಸಿ (+)