ಸೈಂಟಿಸ್ಟ್ ದಿಗಂತ್!

7

ಸೈಂಟಿಸ್ಟ್ ದಿಗಂತ್!

Published:
Updated:
ಸೈಂಟಿಸ್ಟ್ ದಿಗಂತ್!

ನಟ ದಿಗಂತ್ ವಿಜ್ಞಾನಿಯಾಗಲು ಹೊರಟಿದ್ದಾರೆ. ಹಾಗೆಂದ ಮಾತ್ರಕ್ಕೆ ದೊಡ್ಡ ಸಂಶೋಧನೆಗೆ ಕೈ ಹಾಕಿದ್ದಾರೆ ಎಂದಲ್ಲ. ಸದ್ಯಕ್ಕೆ ಅವರು ಮರಿ ವಿಜ್ಞಾನಿ. ನಿಜ, ಅವರು ನಟಿಸುತ್ತಿರುವ ಹೊಸ ಚಿತ್ರದಲ್ಲಿ ಅವರು ವಿಜ್ಞಾನಿಯೊಬ್ಬರ ಜೊತೆ ಸ್ನೇಹ ಬೆಳೆದು ಅವರೊಟ್ಟಿಗೆ ಸೇರಿಕೊಳ್ಳುವ ಕಾಲೇಜು ಹುಡುಗನ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅವರು ಅನಾಥ.ಇನ್ನೂ ಹೆಸರಿಡದ ಈ ಚಿತ್ರವನ್ನು ಮಹೇಶ್ ತಲಕಾಡು ನಿರ್ಮಿಸುತ್ತಿದ್ದಾರೆ. ಚಿತ್ರದ ಕಥೆ ಹೆಣೆದು ಮೊದಲ ಬಾರಿಗೆ ಕನ್ನಡದಲ್ಲಿ ಆ್ಯಕ್ಷನ್‌ಕಟ್ ಹೇಳುತ್ತಿರುವವರು ಬಾಂಬೆಯ ರಣದೀಪ್. ಏಕ್ತಾ ಕಪೂರ್ ನಿರ್ಮಾಣದ ಅನೇಕ ಧಾರಾವಾಹಿಗಳ ನಿರ್ದೇಶನ ಮಾಡಿದವರು ರಣದೀಪ್. ಚಿತ್ರದ ನಾಯಕಿ ಕೃತಿ ಕರಬಂಧ. ಇದೊಂದು ವೈಜ್ಞಾನಿಕ ಕಥೆಯುಳ್ಳ ಚಿತ್ರ. ಕನ್ನಡದಲ್ಲಿ ಇಂತಹ ಕಥೆಯ ಚಿತ್ರ ಹಿಂದೆ ಬಂದಿಲ್ಲ. ಜೊತೆಗೆ ಲವ್‌ಸ್ಟೋರಿ ಕೂಡ ಸೇರಿಕೊಳ್ಳುತ್ತದೆ ಎನ್ನುವ ದಿಗಂತ್ ಈ ಹೊಸ ಬಗೆಯ ಕಥೆ ಜನರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ. ಆದರೆ ಕಥೆಯ ತಿರುಳನ್ನು ಈಗಲೇ ಹೊರಗಿಡಲು ಅವರಿಗೆ ಮನಸಿಲ್ಲ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಕ್‌ಲೈನ್ ನಿರ್ಮಾಣದ ಚಿತ್ರವೊಂದು ಸೆಟ್ಟೇರಲಿದೆ.ಅಂದಹಾಗೆ ದಿಗಂತ್ `ಮನಸಾರೆ~ ಚಿತ್ರದ ಬಳಿಕ ಐಂದ್ರಿತಾ ರೇ ಜೊತೆಗೆ ಅಭಿನಯಿಸಿದ `ಪಾರಿಜಾತ~ ಫೆ.10ರಂದು ಬಿಡುಗಡೆ ಭಾಗ್ಯ ಕಾಣುತ್ತಿದೆ. ಈಗಾಗಲೇ ನಾಲ್ಕು ಚಿತ್ರಗಳು ಅದೇ ದಿನದಂದು ಬಿಡುಗಡೆಗೆ ಕಾದುಕುಳಿತಿರುವುದು ಚಿತ್ರತಂಡದಲ್ಲಿ ಸ್ವಲ್ಪಮಟ್ಟಿನ ತಳಮಳ ಮೂಡಿಸಿದೆ. ಥಿಯೇಟರ್ ಸಮಸ್ಯೆಯೂ ಅವರನ್ನು ಕಾಡಿದೆ. ಆದರೆ ಚಿತ್ರ ಬಿಡುಗಡೆ ಅಂದೇ ನಿಶ್ಚಿತ ಎನ್ನುತ್ತಾರೆ ನಿರ್ಮಾಪಕ ಪರಮೇಶ್ವರ್.ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ  ವ್ಯಕ್ತಪಡಿಸುತ್ತಾರೆ ದಿಗಂತ್. ಅವರ ಮತ್ತು ಶರಣ್ ಜೋಡಿ ಹಾಸ್ಯ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ನಗಿಸುತ್ತದೆ. ಹಾಡುಗಳೂ ಅದ್ಭುತವಾಗಿ ಮೂಡಿಬಂದಿವೆ. ಜೊತೆಗೆ ಐಂದ್ರಿಕಾ ರೇ ಜೊತೆಗಿನ ಕ್ಯೂಟ್ ಲವ್‌ಸ್ಟೋರಿ ಇದೆ. ಹೀಗಾಗಿ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸ ಅವರಿಗಿದೆ.ಸೋಮಾರಿ, ಉಡಾಫೆ ಪಾತ್ರಗಳ ಜೊತೆಗೆ ಲವರ್ ಬಾಯ್ ಇಮೇಜನ್ನೂ ಹೊತ್ತಿರುವ ದಿಗಂತ್ ವಿಜ್ಞಾನಿಯಾಗಿ ಹೃದಯದ ನೋವಿಗೆ ಯಾವ ಮುಲಾಮು ಕಂಡು ಹಿಡಿಯುತ್ತಾರೋ ನೊಡಬೇಕು.!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry