ಮಂಗಳವಾರ, ನವೆಂಬರ್ 12, 2019
28 °C

ಸೈಕಲ್‌ಗೆ ಟೆಂಪೊ ಡಿಕ್ಕಿ: ಸೈಕಲ್ ಸವಾರ ಸಾವು

Published:
Updated:

ಹೊಸಕೋಟೆ: ಪಟ್ಟಣದ ಹೊರವಲಯದ ದೊಡ್ಡಗಟ್ಟಿಗನಬ್ಬೆ ರಸ್ತೆಯ ನಂದಶ್ರೆ ಕಲ್ಯಾಣ ಮಂಟಪದ ಬಳಿ ಟೆಂಪೊ ಒಂದು ಸೈಕಲ್‌ಗೆ ಡಿಕ್ಕಿ ಹೊಡೆದುದರಿಂದ ಅದರ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.ಪಟ್ಟಣದ ತಮ್ಮಗೌಡ ಬಡಾವಣೆ ವಾಸಿ ಪುರೋಹಿತ ವೃತ್ತಿ ಮಾಡುತ್ತಿದ್ದ ಮಂಜುನಾಥ (57) ಮೃತಪಟ್ಟ ವ್ಯಕ್ತಿ. ಅವರು ಕಮ್ಮೇವಾರಿ ಬಡಾವಣೆಯಲ್ಲಿದ್ದ ಸ್ನೇಹಿತರನ್ನು ನೋಡಲು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಟೆಂಪೊ ಹಿಂಭಾಗದಿಂದ ಡಿಕ್ಕಿ ಹೊಡೆಯಿತು. ಅಕ್ರೋಶಗೊಂಡ ಸಾರ್ವಜನಿಕರು ನಂತರ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪ್ರತಿಭಟನೆ: ನಂದಶ್ರೆ ಕಲ್ಯಾಣ ಮಂಟಪದ ಬಳಿ ಅಪಘಾತಗಳು ಹೆಚ್ಚಿದ್ದು ಈ ರಸ್ತೆಯಲ್ಲಿ ರಸ್ತೆಉಬ್ಬು ನಿರ್ಮಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್‌ರವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ನಂತರ ಪ್ರತಿಭಟನೆ ನಿಲ್ಲಿಸಿದರು.

ಪ್ರತಿಕ್ರಿಯಿಸಿ (+)