ಸೈಕಲ್ ಪೋಲೊ: ಕೇರಳ ತಂಡಗಳಿಗೆ ಪ್ರಶಸ್ತಿ

7

ಸೈಕಲ್ ಪೋಲೊ: ಕೇರಳ ತಂಡಗಳಿಗೆ ಪ್ರಶಸ್ತಿ

Published:
Updated:

ಮೈಸೂರು: ರೋಚಕ ಆಟ ಸೈಕಲ್ ಪೋಲೊದಲ್ಲಿ ಕೇರಳದ ಪುರುಷ ಮತ್ತು ಮಹಿಳಾ ತಂಡಗಳು ಭಾನುವಾರ ನಡೆದ ದಸರಾ ಮಹೋತ್ಸವ ಸೈಕಲ್ ಪೊಲೋ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.ದಸರಾ ಸಾಹಸ ಕ್ರೀಡಾ ಉಪಸಮಿತಿ ಮತ್ತು ಕರ್ನಾಟಕ ರಾಜ್ಯ ಸೈಕಲ್ ಪೋಲೊ ಸಂಸ್ಥೆ ಆಶ್ರಯದಲ್ಲಿ ವಿಲೇಜ್ ಹಾಸ್ಟೆಲ್ ಮೈದಾನದಲ್ಲಿ ನಡೆದ ಟೂರ್ನಿಯ ಪುರುಷರ ಫೈನಲ್‌ನಲ್ಲಿ ಕೇರಳ ತಂಡವು 6-2ರಿಂದ ಮೈಸೂರು ವಿರುದ್ಧ ಗೆದ್ದಿತು.ವಿಜೇತ ತಂಡದ ಪರವಾಗಿ ಎ. ವೈಶಾಖ, ಪಿ.ಹರಿಕೃಷ್ಣನ್ ತಲಾ ಎರಡು ಗೋಲು ಗಳಿಸಿದರೆ, ಅನ್ಸಿಫ್, ರಿಯಾಜ್ ತಲಾ ಒಂದು ಗೋಲು ಗಳಿಸಿದರು. ಮೈಸೂರಿನ ಪರವಾಗಿ ಕೀರ್ತಿಕುಮಾರ್ 2 ಗೋಲು ಹೊಡೆದರು.

ಲೀಗ್ ಹಂತದ ಪಂದ್ಯಗಳಲ್ಲಿ ಕೇರಳ ತಂಡವು ಬೆಳಗಾವಿ ವಿರುದ್ಧ 5-0 ಗೋಲುಗಳಿಂದ ಜಯಿಸಿತು.

ಇನ್ನೊಂದು ಪಂದ್ಯದಲ್ಲಿ ಬೆಳಗಾವಿ ಎ. ತಂಡವು 0-4ರಿಂದ ಬೆಳಗಾವಿ (ಬಿ) ತಂಡಕ್ಕೆ ಶರಣಾಯಿತು.ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡವು 5-0ಯಿಂದ ಧಾರವಾಡ ವಿರುದ್ಧ ಗೆಲುವು ಸಾಧಿಸಿತು. 

ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದ ಕೇರಳ ತಂಡವು 5-0ಯಿಂದ ಬೆಳಗಾವಿ ತಂಡವನ್ನು, ಇನ್ನೊಂದು ಪಂದ್ಯದಲ್ಲಿ 6-0ಯಿಂದ ಮೈಸೂರು ತಂಡವನ್ನು ಸೋಲಿಸಿತು.

ಮೈಸೂರು ತಂಡವು 7-0ಯಿಂದ ಮೈಸೂರು ತಂಡದ ವಿರುದ್ಧ ಜಯಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry