ಸೈಕೊ ಶಂಕರ್ ಇನ್ನೂ ಪತ್ತೆ ಇಲ್ಲ

7

ಸೈಕೊ ಶಂಕರ್ ಇನ್ನೂ ಪತ್ತೆ ಇಲ್ಲ

Published:
Updated:

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡಿರುವ ಕೈದಿ `ಜೈಶಂಕರ್‌ನ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆತನ ಹುಟ್ಟೂರಾದ ತಮಿಳುನಾಡಿನ ಈಡಪ್ಪಾಡಿ ತಾಲ್ಲೂಕಿನ ಕಟ್ಟುವಾಳ್ ಕನ್ನಿಯಾಪಟ್ಟಿ ಗ್ರಾಮಕ್ಕೆ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಅಲ್ಲದೇ, ನಗರದಲ್ಲೂ ಸಿಬ್ಬಂದಿ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈವರೆಗೆ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಬಿ.ಕೆ.ಸಿಂಗ್ `ಪ್ರಜಾವಾಣಿ'ಗೆ ತಿಳಿಸಿದರು.ನೋಟಿಸ್: ಜೈಶಂಕರ್ ಅಲಿಯಾಸ್ ಶಂಕರ್ ಪತ್ತೆಗಾಗಿ ಪೊಲೀಸರು `ಲುಕ್‌ಔಟ್ ನೋಟಿಸ್' ಹೊರಡಿಸಿದ್ದಾರೆ. ಎಸಿಪಿ ಎಸ್.ಪಿ.ಬಾಲಾಜಿ ಸಿಂಗ್ ಅವರ ಮೊಬೈಲ್ ಸಂಖ್ಯೆ 94808 01606ಕ್ಕೆ ಸುಳಿವು ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಬಗ್ಗೆ ಸಾರ್ವಜನಿಕರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ 080 - 2574 3201, 2294 3475 ಅಥವಾ ಬೆಂಗಳೂರು ನಗರ ಆಗ್ನೇಯ ಪೊಲೀಸ್ ವಿಭಾಗದ ನಿಯಂತ್ರಣ ಕೊಠಡಿಯ 080 - 2294 3481, 2294 3482 ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಬಹುದು. ಅಲ್ಲದೇ ಬೆಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 080 - 2294 3322 ಅಥವಾ ಮಡಿವಾಳ ಉಪವಿಭಾಗದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry