ಸೈಕ್ಲಿಂಗ್‌: ಆತಿಥೇಯರ ಪಾರಮ್ಯ

7

ಸೈಕ್ಲಿಂಗ್‌: ಆತಿಥೇಯರ ಪಾರಮ್ಯ

Published:
Updated:
ಸೈಕ್ಲಿಂಗ್‌: ಆತಿಥೇಯರ ಪಾರಮ್ಯ

ವಿಜಾಪುರ: ಗುಮ್ಮಟ ನಗರಿಯಲ್ಲಿ ಭಾನುವಾರ ಆತಿಥೇಯ ಸೈಕ್ಲಿಸ್ಟ್‌ಗಳ ಸಾಧನೆಯೇ ಪ್ರತಿಧ್ವನಿಸುತಿತ್ತು. ದಿನದ ಬಹುತೇಕ ಸ್ಪರ್ಧೆಗಳಲ್ಲಿ ಬಂಗಾರ ಗೆದ್ದ ವಿಜಾಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್‌ಗಳು ರಾಜ್ಯಮಟ್ಟದ ಏಳನೇ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ ಮೊದಲ ದಿನ ಪಾರಮ್ಯ ಮೆರೆದರು.ರಾಜ್ಯ ಹವ್ಯಾಸಿ ಸೈಕ್ಲಿಂಗ್‌ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿನ  ಸೈಕಲ್‌ ಟ್ರ್ಯಾಕ್‌ನಲ್ಲಿ ಬೆಳಿಗ್ಗೆ ಏಳರ ಸುಮಾರಿಗೆ ಆರಂಭಗೊಂಡ ಸ್ಪರ್ಧೆ ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ದಿನದ 15 ಸ್ಪರ್ಧೆಗಳ ಪೈಕಿ 11ರಲ್ಲಿ ವಿಜಾಪುರದ ಸ್ಪರ್ಧಿಗಳು ಬಂಗಾರದ ಬೇಟೆಯಾಡಿದರು.ವಿಜಾಪುರ ಕ್ರೀಡಾ ನಿಲಯಕ್ಕೆ ಗೆಲುವಿನ ಆರಂಭ ಒದಗಿಸಿದ್ದು ಸಚಿನ್‌ ಪವಾರ್‌. ಮುಂಜಾನೆ ಎಳೆಬಿಸಿಲಿನ ಕಾವು ಹೆಚ್ಚಿಸುವಂತೆ ತುರುಸಿನ ಸ್ಪರ್ಧೆಯಿಂದ ಕೂಡಿದ್ದ ಬಾಲಕರ 6 ಕಿ.ಮೀ ಸ್ಕ್ರಾಚ್‌ ರೇಸ್‌ನ ಕಡೆಯ ಸುತ್ತುಗಳಲ್ಲಿ ಗಾಳಿಯನ್ನು ಸೀಳುತ್ತಾ ಬುಲೆಟ್ಟಿನಂತೆ ಮುನ್ನುಗ್ಗುತ್ತಿದ್ದ ಸೈಕ್ಲಿಸ್ಟ್‌ಗಳು ನೆರೆದಿದ್ದ ಪ್ರೇಕ್ಷಕರ ಚಪ್ಪಾಳೆಯ ಪ್ರೋತ್ಸಾಹ ಗಿಟ್ಟಿಸಿದರು. ದಿನದ ಕಡೆಯಲ್ಲಿ ನಡೆದ ಪುರುಷರ ಟೀಮ್‌ ಪರ್ಸ್ಯೂಟ್‌ ಸಹ ರೋಚಕವಾಗಿತ್ತು.ಮಹಿಳೆಯರ ವಿಭಾಗದ ಸ್ಪರ್ಧೆಗಳು ಅಷ್ಟೇ ರೋಚಕವಾಗಿದ್ದವು, ವಿಜಾಪುರ ಜಿಲ್ಲೆಯ ಕೊಲ್ಹಾರ ಗ್ರಾಮದ ಸಾಯಿರಾ ಅತ್ತಾರ್‌ 500 ಮೀ ಟೈಮ್‌ ಟ್ರಯಲ್ಸ್‌ ಹಾಗೂ 3 ಕಿ.ಮೀ ವೈಯಕ್ತಿಕ ಪರ್ಸ್ಯೂಟ್‌ ನಲ್ಲಿ ಬಂಗಾರದ ಪದಕ ಕೊರಳಿಗೆ ಏರಿಸಿಕೊಂಡರು. ಕಡೆಯ ದಿನವಾದ ಸೋಮವಾರ ಬೆಳಿಗ್ಗೆ 6.30ರಿಂದ ಸ್ಪರ್ಧೆ ನಡೆಯಲಿದೆ.ಫಲಿತಾಂಶ: ಪುರುಷರು: 1000 ಮೀ ಟೈಮ್‌ ಟ್ರಯಲ್ಸ್‌:

ಸಚಿನ್ ಕುರಿಯಾರ (ಗದಗ)–1, ಆಸಿಫ್ ಅತ್ತಾರ್‌ (ವಿಜಾಪುರ)–2, ರಾಮಪ್ಪ ಅಂಬಿ (ಬಾಗಲಕೋಟೆ)–3. ಸಮಯ: 1 ನಿ, 18.74 ಸೆ.

4 ಕಿ.ಮಿ. ವೈಯಕ್ತಿಕ ಪರ್ಸ್ಯೂಟ್‌: ಲಕ್ಷ್ಮಣ ಕುರಣಿ (ವಿ)–1, ರಾಮಪ್ಪ ಅಂಬಿ (ಬಾ)–2, ಸಂಗಮೇಶ ತಳವಾರ (ವಿ)–3.  ಸ: 5 ನಿ. 38.33 ಸೆ.4 ಕಿ.ಮೀ. ತಂಡ ಪರ್ಸ್ಯೂಟ್:  ವಿಜಾಪುರ (ಅಸಿಫ್‌ ಅತ್ತಾರ, ಸಂಗಮೇಶ ತಳವಾರ, ರಮೇಶ ರಾಥೋಡ್‌, ಲಕ್ಷ್ಮಣ ಕುರಣಿ)–1, ಗದಗ (ಶಿವರಾಜ ಮಲ್ಲಿಗವಾಡ, ಸಚಿನ್‌ ಕುರಿಯಾರ, ಶ್ರೀಶೈಲ ಲಾಯನ್ನವರ, ಬಾಬು ಚಲವಾದಿ)–2, ಬಾಗಲಕೋಟೆ (ರಮೇಶ ಅಂಬಿ. ಅಡಿವೆಪ್ಪ ಆವಟಿ, ಪೈಗಂಬರ್‌ ನದಾಫ್‌, ಮಾರುತಿ ಹೊನ್ನಪ್ಪನವರ)–3.ಬಾಲಕರು:  18 ವರ್ಷದ ಒಳಗಿನವರು: 3 ಕಿ.ಮೀ ವೈಯಕ್ತಿಕ  ಪರ್ಸ್ಯೂಟ್‌; ರಾಜು ಕುರಣಿ ( ಕ್ರಿ.ನಿ. ವಿ)–1, ಸಮಯ: 4 ನಿ, 21.97 ಸೆ. ಸಚಿನ್ ಪವಾರ್‌ (ಕ್ರಿ.ನಿ. ವಿ)–2, ಶಿವಲಿಂಗಪ್ಪ ಯಳಮೇಲಿ (ಕ್ರಿ.ನಿ. ವಿ)–3.6 ಕಿ.ಮೀ ಸ್ಕ್ರ್ಯಾಚ್ ರೇಸ್: ಸಚಿನ್ ಪವಾರ್‌ (ಕ್ರೀಡಾ ನಿಲಯ, ವಿಜಾಪುರ)–1, ಶೇಖರ ಬೆಳ್ಳುಬ್ಬಿ  (ಕ್ರಿ.ನಿ.ವಿ)–2, ಗಣೇಶ ಕನಸೇನವರ (ಕ್ರಿ.ನಿ.ವಿ)–3.16 ವರ್ಷದ ಒಳಗಿನವರು: 2 ಕಿ.ಮೀ. ವೈಯಕ್ತಿಕ ಪರ್ಸ್ಯೂಟ್‌: ಯಲ್ಲಪ್ಪ ಶಿರಬುರ (ಬಾಗಲಕೋಟೆ)–1, ಸಮಯ– 2ನಿ. 53.30 ಸೆ. ಸಂತೋಷ ಕುರಣಿ (ಕ್ರಿ.ನಿ.ವಿ)–2, ಶೇಖರ ಬೆಳ್ಳುಬ್ಬಿ (ಕ್ರಿ.ನಿ.ವಿ)–3. ಸಮಯ– 2ನಿ. 53.30 

  

4 ಕಿ.ಮೀ. ಸ್ಕ್ರ್ಯಾಚ್ ರೇಸ್: ಸಂತೋಷ ಕುರಣಿ (ಕ್ರಿ.ನಿ. ವಿ)–1, ಮುಚಖಂಡೆಪ್ಪ ಗುರವ (ಕ್ರಿ.ನಿ.ವಿ)–2. ರಾಜು ಭಾಟಿ (ಕ್ರಿ.ನಿ.ವಿ)–3.

14 ವರ್ಷದ ಒಳಗಿನವರು; 2 ಕಿ.ಮಿ. ವೈಯಕ್ತಿಕ ಪರ್ಸ್ಯೂಟ್‌

ರಾಜು ಭಾಟಿ (ಕ್ರಿ.ನಿ. ವಿ)–1. ಆನಂದ ದಂಡಿನ (ಕ್ರಿ.ನಿ. ವಿ)–2, ಮಂಜುನಾಥ ಗುನ್ನಾಪುರ (ಕ್ರಿ.ನಿ.

ಮಹಿಳೆಯರು:  500 ಮೀ ಟೈಮ್‌ ಟ್ರಯಲ್ಸ್‌: ಶಾಹಿರಾ ಅತ್ತಾರ್‌ ( ವಿಜಾಪುರ)–1. ಸವಿತಾ ಗೌಡರ (ಬಾ)–2, ಶಶಿಕಲಾ ಭಜಂತ್ರಿ (ವಿ)–3. ಸಮಯ: 47.31 ಸೆ.ಬಾಲಕಿಯರ ವಿಭಾಗ

18 ವರ್ಷದೊಳಗಿನ ಒಳಗಿನವರು: 500 ಮೀ ಟೈಮ್ಸ ಟ್ರಯಲ್ಸ್‌:

ಸಾಯಿರಾಬಾನು ಲೋಧಿ (ಕ್ರಿ.ನಿ.ವಿ.)–1  ಶ್ರೀದೇವಿ ನಿಕ್ಕಂ (ಕ್ರಿ.ನಿ. ವಿ)–2, ದಾನಮ್ಮ ಹರಿಜನ (ಬೆಳಗಾವಿ)–3. ಸಮಯ: 51. 91 ಸೆ.3 ಕಿ.ಮೀ. ವೈಯಕ್ತಿಕ ಪರ್ಸ್ಯೂಟ್:

ಶ್ರೀದೇವಿ ನಿಕ್ಕಂ (ಕ್ರಿ.ನಿ. ವಿ)–1, ಸಮಯ: 5 ನಿ. 26.20 ಸೆ.

ಸಾಯಿರಾಬಾನು ಲೋಧಿ (ಕ್ರಿ.ನಿ. ವಿ)–2, ಸುರೇಖಾ ಸತ್ತಿಗೇರಿ (ಬೆ)–3.16 ವರ್ಷದ ಒಳಗಿನವರು: 2 ಕಿ.ಮೀ. ವೈಯಕ್ತಿಕ ಪರ್ಸ್ಯೂಟ್‌ :

1. ರೇಣುಕಾ ದಂಡಿನ (ಕ್ರಿ.ನಿ. ವಿ)–1, ಶಾಯಿರಾಬಾನು ಲೋಧಿ   (ಕ್ರಿ.ನಿ.ವಿ) –2, ಭಾಗ್ಯಶ್ರೀ ಮಸೂತಿ (ಬಾಗಲಕೋಟೆ)–3. ಸಮಯ– 3ನಿ. 27.90ಸೆ.3 ಕಿ.ಮೀ. ಸ್ಕ್ರ್ಯಾಚ್ ರೇಸ್: ಶೈಲಾ ಮಟ್ಯಾಳ (ಬಾ)–1,ಮೇಘಾ ಗುಗಾಡ (ಕ್ರಿ.ನಿ. ವಿ)–2, ರಾಜೇಶ್ವರಿ ಡುಳ್ಳಿ (ಬಾ)–3.

14 ವರ್ಷದೊಳಗಿನ ಒಳಗಿನವರು: 2 ಕಿ.ಮೀ. ವೈಯಕ್ತಿಕ ಪರ್ಸ್ಯೂಟ್‌: ಮೇಘಾ ಗೂಗಾಡ (ಕ್ರಿ.ನಿ. ವಿ)–1  ಸಮಯ: 3 ನಿ. 23.60 ಸೆ. ಪ್ರೇಮಾ ಗುಣದಾಳ  (ಕ್ರಿ.ನಿ. ವಿ)–2, ಆರತಿ ಭಾಟಿ ((ಕ್ರಿ.ನಿ. ವಿ)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry