ಸೈಕ್ಲಿಂಗ್ ವೆಲ್ಲೊಡ್ರೋಮ್‌ಗೆ 2 ಕೋಟಿ ಮಂಜೂರು

7

ಸೈಕ್ಲಿಂಗ್ ವೆಲ್ಲೊಡ್ರೋಮ್‌ಗೆ 2 ಕೋಟಿ ಮಂಜೂರು

Published:
Updated:

ವಿಜಾಪುರ: ವಿಜಾಪುರ ನಗರದಲ್ಲಿ ಸೈಕ್ಲಿಂಗ್ ವೆಲ್ಲೊಡ್ರೋಮ್ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ  2 ಕೋಟಿಗೆ ರೂಪಾಯಿಗೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರಿನಿವಾಸ್ ತಿಳಿಸಿದ್ದಾರೆ.ವಿಜಾಪುರದಲ್ಲಿ ಸೈಕ್ಲಿಂಗ್ ವೆಲ್ಲೊಡ್ರೋಮ್ ನಿರ್ಮಿಸುವ  4.23 ಕೋಟಿ ರೂಪಾಯಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಈ ಮೊತ್ತದ ಪೈಕಿ ಮೊದಲನೇ ಕಂತಾಗಿ  2 ಕೋಟಿ ರೂಪಾಯಿಗೆ  ಸರ್ಕಾರ ಮಂಜೂರಾತಿ ನೀಡಿದೆ ಎಂದು ಅವರು ಹೇಳಿದ್ದಾರೆ.ನಗರದ ಸೈಕ್ಲಿಂಗ್ ವೆಲ್ಲೊಡ್ರೋಮ್‌ಗೆ ಹಣ ಮಂಜೂರು ಮಾಡಿಸಿದ ಸಚಿವ ಅಪ್ಪಚ್ಚು ರಂಜನ್ ಅವರಿಗೆ ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ ಕೃತಜ್ಞತೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry