ಸೈನಾ ನೆಹ್ವಾಲ್ ಕನಸು ಭಗ್ನ

7

ಸೈನಾ ನೆಹ್ವಾಲ್ ಕನಸು ಭಗ್ನ

Published:
Updated:

ನವದೆಹಲಿ (ಪಿಟಿಐ): ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಸೈನಾ ನೆಹ್ವಾಲ್ ಕನಸು ಭಗ್ನಗೊಂಡಿದೆ. ಭಾರತದ ಆಟಗಾರ್ತಿ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲೇ ಮುಗ್ಗರಿಸಿದರು.ಒಡೆನ್ಸ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಚೈನೀಸ್ ತೈಪೆಯ ತ್ಸು ಯಿಂಗ್ ತಾಯ್ 21-19, 21-13 ರಲ್ಲಿ ಭಾರತದ ಆಟಗಾರ್ತಿಯ ವಿರುದ್ಧ ಅಚ್ಚರಿಯ ಗೆಲುವು ಪಡೆದರು. ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದ ಸೈನಾ 36 ನಿಮಿಷಗಳ ಹೋರಾಟದ ಬಳಿಕ ಎದುರಾಳಿಗೆ ಶರಣಾದರು.ಎಂದಿನ ಲಯದಲ್ಲಿ ಆಡಲು ವಿಫಲರಾದ ಸೈನಾ ಹಲವು ತಪ್ಪುಗಳನ್ನು ಎಸಗಿದರು. ಇದರ ಲಾಭವನ್ನು ಪಡೆದುಕೊಂಡ ತಾಯ್ ಗೆಲುವು ತಮ್ಮದಾಗಿಸಿಕೊಂಡರು.ಮಿಶ್ರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಮತ್ತು ವಿ. ದಿಜು ಮೂರನೇ ಸುತ್ತು ಪ್ರವೇಶಿಸಿದರು. ಅವರು ಎರಡನೇ ಸುತ್ತಿನ ಪಂದ್ಯದಲ್ಲಿ 21-16, 21-19 ರಲ್ಲಿ ಇಂಗ್ಲೆಂಡ್‌ನ ಕ್ರಿಸ್ ಅಡ್‌ಕಾಕ್ ಮತ್ತು    ಇಮೋಗೆನ್ ಬಾಂಕೀರ್ ವಿರುದ್ದ ಗೆಲುವು ಪಡೆದರು.ಕಶ್ಯಪ್‌ಗೆ ಸೋಲು: ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪಿ. ಕಶ್ಯಪ್ ಸೋಲು ಅನುಭವಿಸಿದರು. ವಿಶ್ವದ ಅಗ್ರ ರ‌್ಯಾಂಕಿಂಗ್‌ನ ಆಟಗಾರ ಲೀ ಚೊಂಗ್ ವೀ 21-11, 21-13 ರಲ್ಲಿ ಭಾರತದ ಆಟಗಾರನ ವಿರುದ್ಧ ಜಯ ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry