ಶನಿವಾರ, ಮೇ 15, 2021
25 °C

ಸೈನಾ ಸವಾಲು ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈನಾ ಸವಾಲು ಅಂತ್ಯ

ನವದೆಹಲಿ (ಪಿಟಿಐ): ಜಪಾನ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಸೈನಾ ನೆಹ್ವಾಲ್ ಕನಸು ಭಗ್ನಗೊಂಡಿದೆ. ಭಾರತದ ಆಟಗಾರ್ತಿ ಸೆಮಿಫೈನಲ್‌ನಲ್ಲಿ ಅಚ್ಚರಿಯ ಸೋಲು ಅನುಭವಿಸಿದರು.ಟೋಕಿಯೊದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜರ್ಮನಿಯ ಜೂಲಿಯನ್ ಶೆಂಕ್ 21-19, 21-10 ರಲ್ಲಿ ಸೈನಾ ವಿರುದ್ಧ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರು. ನಾಲ್ಕನೇ ಶ್ರೇಯಾಂಕ ಹೊಂದಿದ್ದ ಭಾರತದ ಆಟಗಾರ್ತಿ 39 ನಿಮಿಷಗಳಲ್ಲಿ ಶರಣಾದರು.ಮೊದಲ ಸೆಟ್‌ನಲ್ಲಿ ತುರುಸಿನ ಪೈಪೋಟಿ ಕಂಡುಬಂತು. ಒಂದು ಹಂತದಲ್ಲಿ ಇಬ್ಬರೂ 19-19 ರಲ್ಲಿ ಸಮಬಲ ಸಾಧಿಸಿದ್ದರು. ಆ ಬಳಿಕ ಶೆಂಕ್ ಮೇಲುಗೈ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಆರಂಭದಲ್ಲಿ ಅಲ್ಪ ಹೋರಾಟ ಕಂಡುಬಂತು. ಉಭಯ ಆಟಗಾರ್ತಿಯರೂ 10-10 ರಲ್ಲಿ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ಜರ್ಮನಿಯ ಆಟಗಾರ್ತಿ ಅದ್ಭುತ ಪ್ರದರ್ಶನ ನೀಡಿದರು. ಸತತ 11 ಪಾಯಿಂಟ್ ಗಿಟ್ಟಿಸಿ ಸೆಟ್ ಮಾತ್ರವಲ್ಲ, ಪಂದ್ಯವನ್ನೂ ತಮ್ಮದಾಗಿಸಿಕೊಂಡರು.ಸೈನಾ ಮತ್ತು ಶೆಂಕ್ ಇದುವರೆಗೆ ಎಂಟು ಸಲ ಪರಸ್ಪರ ಎದುರಾಗಿದ್ದಾರೆ. ಭಾರತದ ಆಟಗಾರ್ತಿ 5-3 ರಲ್ಲಿ ಮೇಲುಗೈ ಪಡೆದಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸೈನಾ ಇದೇ ಮೊದಲ ಬಾರಿ ಶೆಂಕ್ ಕೈಯಲ್ಲಿ ಸೋಲು ಅನುಭವಿಸಿದ್ದಾರೆ. ಫೈನಲ್‌ನಲ್ಲಿ ಶೆಂಕ್ ಮತ್ತು ಚೀನಾದ ಯಿಹಾನ್ ವಾಂಗ್ ಪರಸ್ಪರ ಪೈಪೋಟಿ ನಡೆಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.