`ಸೈನಿಕರು ಯದ್ಧದ ಯಂತ್ರವಲ್ಲ'

7

`ಸೈನಿಕರು ಯದ್ಧದ ಯಂತ್ರವಲ್ಲ'

Published:
Updated:

ಬೆಂಗಳೂರು: ಯಶಸ್ವಿನಿ ಪ್ರಕಾಶನವು ಹೊರತಂದಿರುವ ಸಿ.ಕೆ.ಯೋಗಾನಂದ ಅವರ `ಶೃಂಖಲಾ' ಕಾದಂಬರಿಯನ್ನು ಈಚೆಗೆ ನಗರದ ಕಬ್ಬನ್ ಉದ್ಯಾನವನದ ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್‌ನಲ್ಲಿ ಬಿಡುಗಡೆ ಮಾಡಲಾಯಿತು.ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಕೃತಿ ಬಿಡುಗಡೆ ಮಾಡಿ ಮಾತನಾಡಿ `ಸೈನಿಕರು ಯುದ್ಧ ಮಾಡುವ ಯಂತ್ರವಲ್ಲ. ಅವರಿಗೂ ಕೂಡ ಬದುಕು ಇದೆ ಎನ್ನುವುದನ್ನು ಲೇಖಕರು ಕಾದಂಬರಿಯಲ್ಲಿ ಚೆನ್ನಾಗಿ ಬಿಂಬಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಒಂದು ಉತ್ತಮ ಕೃತಿಯನ್ನು ನೀಡಿದ್ದಾರೆ' ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಧರ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಆಟಗಾರ ಪ್ರಕಾಶ್ ಜಯರಾಮಯ್ಯ ಅವರನ್ನು ಸನ್ಮಾನಿಸಲಾಯಿತು.ನಗರಾಭಿವೃದ್ಧಿ ಇಲಾಖೆ ಉಪಕಾರ್ಯದರ್ಶಿ ಎನ್.ಆರ್.ಪ್ರಭು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry