ಸೈನೈಡ್ ಪ್ರಾಶನ: 41 ಆನೆಗಳ ಸಾವು

7

ಸೈನೈಡ್ ಪ್ರಾಶನ: 41 ಆನೆಗಳ ಸಾವು

Published:
Updated:

ಹರಾರೆ (ಐಎಎನ್‌ಎಸ್): ಬೇಟೆಗಾರರು ನೀರಿನ ಹೊಂಡದಲ್ಲಿ ಸೈನೈಡ್ ಬೆರಸಿ 41 ಆನೆಗಳನ್ನು ಹತ್ಯೆ ಮಾಡಿದ ಘಟನೆ ಜಿಂಬಾಬ್ವೆಯ ವಾಂಗೆ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ.

ಆನೆ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ನೀರಿನ ಹೊಂಡಕ್ಕೆ ಮಾರಕ ವಿಷ ಸೈನೈಡ್‌ನ್ನು ಬೆರಸಿರುವುದರಿಂದ 14, 651 ಚದರ ಕಿ. ಮೀ ವಿಸ್ತೀರ್ಣದ ರಾಷ್ಟ್ರೀಯ ಉದ್ಯಾನದ ಜೈವಿಕ ವ್ಯವಸ್ಥೆ ಕಲುಷಿತಗೊಂಡಿದೆ. ಇನ್ನೂ ನೂರಾರು ಪ್ರಾಣಿಗಳು ಸಾಯುವ ಆತಂಕ ಎದುರಾಗಿದೆ. ಬಂಧಿತರಿಂದ ಎರಡು ಆನೆಗಳ ಅಸ್ಥಿಪಂಜರ ಮತ್ತು 1.2 ಲಕ್ಷ ಡಾಲರ್ ಮೌಲ್ಯದ 17 ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು  ಮೂಲಗಳು ತಿಳಿಸಿವೆ.

ಇತರ ಆನೆಗಳ ಅಸ್ಥಿಪಂಜರಗಳಿಗಾಗಿ ಶೋಧ ನಡೆದಿದೆ. ನೀರಿನ ಹೊಂಡಕ್ಕೆ ವಿಷ ಬೆರೆಸಿರುವುದರಿಂದ ಆಗಿರುವ ಜೈವಿಕ ದುಷ್ಪರಿಣಾಮವನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry