ಸೈಫ್ ಅಲಿ ಖಾನ್ ಬಂಧನ, ಬಿಡುಗಡೆ

7

ಸೈಫ್ ಅಲಿ ಖಾನ್ ಬಂಧನ, ಬಿಡುಗಡೆ

Published:
Updated:

ಮುಂಬೈ:  ಐಷಾರಾಮಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಅನಿವಾಸಿ ಭಾರತೀಯ ಉದ್ಯಮಿ ಇಕ್ಬಾಲ್ ಶರ್ಮಾ ಎಂಬುವವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆಸಂಬಂಧಿಸಿದಂತೆ ಬಾಲಿವುಡ್ ನಟ  ಸೈಫ್ ಅಲಿ ಖಾನ್ ಅವರನ್ನು ಬುಧವಾರ ಪೊಲೀಸರು ವಶಕ್ಕೆ ತೆಗೆದುಕೊಂಡು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಸೈಫ್ ಅಲಿ ಖಾನ್ ಕಲಾಬಾ ಪೊಲೀಸರ ಎದುರು ಶರಣಾದ ಒಂದು ಗಂಟೆಯ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡರು.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 325 ಮತ್ತು 34ರ ಅಡಿಯಲ್ಲಿ ಸೈಫ್ ಅಲಿ ಖಾನ್ ಮತ್ತು ಸ್ನೇಹಿತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.  ಸೈಫ್ ಕೊಲಾಬ ಪೊಲೀಸ್ ಠಾಣೆಗೆ ಹಾಜರಾದ ಸಂದರ್ಭಲ್ಲಿ ಪ್ರೇಯಸಿ ನಟಿ ಕರೀನಾ ಕಪೂರ್ ಜತೆಗಿದ್ದರು.

ಈ ಹಲ್ಲೆ ಪ್ರಕರಣವು ತಾಜ್ ಹೋಟೆಲ್‌ನ ವಾಸವಿ ರೆಸ್ಟೋರೆಂಟ್‌ನಲ್ಲಿ ಮಂಗಳವಾರ ರಾತ್ರಿ ನಡೆದಿತ್ತು. ಸೈಫ್  ತಮ್ಮ ಪ್ರೇಯಸಿ ನಟಿ ಕರೀನಾ ಕಪೂರ್ ಮತ್ತು ಇತರ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಲ್ಲಿ ಮಂಗಳವಾರ ರಾತ್ರಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಮೇಲೆ ಸೈಫ್ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿ ಭಾರತೀಯ ಮೂಲದ ದಕ್ಷಿಣ ಆಫ್ರಿಕ ಉದ್ಯಮಿ ಇಕ್ಬಾಲ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry