ಸೈಫ್ ಆಲಿಖಾನ್ ವಿರುದ್ಧ ಆರೋಪ ಪಟ್ಟಿ

7

ಸೈಫ್ ಆಲಿಖಾನ್ ವಿರುದ್ಧ ಆರೋಪ ಪಟ್ಟಿ

Published:
Updated:

 


ಮುಂಬೈ (ಪಿಟಿಐ): ತಾಜ್ ಐಷಾರಾಮಿ ಹೋಟೆಲ್‌ನಲ್ಲಿ ಕಳೆದ ಹತ್ತು ತಿಂಗಳ ಹಿಂದೆ ನಡೆದಿದ್ದ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೈಫ್ ಆಲಿಖಾನ್ ವಿರುದ್ಧ ಮುಂಬೈ ಪೊಲೀಸರು ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.ಸೈಫ್ ಆಲಿ ಖಾನ್ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮುಂಬೈ ವಲಯ ಪೊಲೀಸ್ ಅಧಿಕಾರಿ ರವೀಂದ್ರ ಸಿಸ್ವೇ ತಿಳಿಸಿದ್ದಾರೆ. ಕಳೆದ ಫೆಬ್ರುವರಿ 22ರಂದು ಸೈಫ್ ಆಲಿಖಾನ್ ಮತ್ತು ದಕ್ಷಿಣಾ ಆಫ್ರಿಕಾದ ಉದ್ಯಮಿ ಇಕ್ಬಾಲ್ ನಡುವೆ ತಾಜ್ ಹೋಟೆಲ್‌ನಲ್ಲಿ ಜಗಳ ನಡೆದಿತ್ತು. ಘಟನೆಯಲ್ಲಿ ಇಕ್ಬಾಲ್ ಮೇಲೆ ಸೈಫ್ ಆಲಿಖಾನ್ ಮತ್ತು ಆತನ ಮೂವರು ಸ್ನೇಹಿತರು ಹಲ್ಲೆ ನಡೆಸಿದ್ದರು. ಈ ಸಂಬಂಧ ಇಕ್ಬಾಲ್ ಮುಂಬೈನ ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry