ಸೈಫ್ ಇನ್ನಷ್ಟು ಫಿಟ್‌

7

ಸೈಫ್ ಇನ್ನಷ್ಟು ಫಿಟ್‌

Published:
Updated:

ನವೆಂಬರ್‌ನಲ್ಲಿ ತೆರೆಕಾಣಲಿರುವ ‘ಬುಲೆಟ್‌ ರಾಜಾ’ ಸಿನಿಮಾಗಾಗಿ ನಟ ಸೈಫ್‌ ಅಲಿ ಖಾನ್ ತಮ್ಮ ದೇಹವನ್ನು ಇನ್ನಷ್ಟು ಹುರಿಗೊಳಿಸಿದ್ದಾರಂತೆ. ಆಕ್ಷನ್‌ ಹಾಗೂ ಮನರಂಜನೆಯಿಂದ ತುಂಬಿದ ಟಿಗ್ಮಾಂಷು ಧುಲಿಯಾ ಅವರ ಈ ಸಿನಿಮಾದಲ್ಲಿ ಇನ್ನಷ್ಟು ಫಿಟ್‌ ಹಾಗೂ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬುದು ಸೈಫ್  ಕಸರತ್ತಿನ ಹಿಂದಿರುವ ಗುಟ್ಟು.‘ರೇಸ್‌ 2 ಚಿತ್ರ ಮಾಡುವ ಸಂದರ್ಭದಲ್ಲಿ ನಾನು ಅಷ್ಟೊಂದು ಫಿಟ್‌ ಆಗಿರಲಿಲ್ಲ. ಆದರೆ ಈ ಸಿನಿಮಾಗಾಗಿ ಹೆಚ್ಚಿನ ಅಭ್ಯಾಸ ಮಾಡಿ ದೃಢಕಾಯನಾಗಿದ್ದೇನೆ. ಫಿಟ್‌ನೆಸ್ ಮೇಲೆಯೇ ಕೆಲವೊಮ್ಮೆ ಆಂಗಿಕ ಅಭಿನಯವೂ ಅವಲಂಬಿತವಾಗಿರುತ್ತದೆ. ‘ಬುಲೆಟ್‌ ರಾಜಾ’ ಸಿನಿಮಾ ಬಯಸುವ -ಲಗುಬಗೆಯ ಹಾಗೂ ಆಕ್ಷನ್‌ ಚಿತ್ರಕ್ಕೆ ಹೊಂದುವಂತೆ ನನ್ನ ದೇಹಸಿರಿ ಬದಲಾಗಿದೆ’ ಎಂದು ತಮ್ಮ ಫಿಟ್‌ನೆಸ್‌ ಕುರಿತು ಹೇಳಿಕೊಂಡಿದ್ದಾರೆ ಸೈಫ್‌.ಉತ್ತರ ಪ್ರದೇಶದಲ್ಲಿ ನಡೆದ ಮಾಫಿಯಾ ಬಗ್ಗೆ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಆಕ್ಷನ್‌ಗೆ ಪ್ರಾಧಾನ್ಯವಿದೆ. ‘ಸಿನಿಮಾದಲ್ಲಿ ದೈಹಿಕವಾಗಿ ಫಿಟ್‌ ಹಾಗೂ ಚೆನ್ನಾಗಿ ಕಾಣುತ್ತಿದ್ದರೆ ಖುಷಿ ಎನಿಸುತ್ತದೆ’ ಎಂದು ಸೈಫ್‌ ನುಡಿದಿದ್ದಾರೆ.ಅಂದಹಾಗೆ ಸಿನಿಮಾಗಾಗಿ ದೇಹ ದಂಡಿಸಿ ಕಟ್ಟುಮಸ್ತಾಗಿರುವ ಸೈಫ್‌ಗೆ ಸೋನಾಕ್ಷಿ ಸಿನ್ಹಾ, ಜಿಮ್ಮಿ ಶೆರ್ಗಿಲ್‌, ವಿದ್ಯುತ್‌ ಜಾಮ್‌ವಾಲ್‌, ಗುಲ್ಶನ್‌ ಗ್ರೋವರ್‌, ರಾಜ್‌ ಬಬ್ಬರ್‌, ಚಂಕಿ ಪಾಂಡೆ ಮುಂತಾದವರು ಸಾಥ್‌ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry